ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಸೀಸನ್-4 ಉದ್ಘಾಟನೆ
ನಟನೆ ಮತ್ತು ವ್ಯಕ್ತಿತ್ವ ಎರಡರಿಂದಲೂ ಜನರ ಹೃದಯಕ್ಕೆ ಹತ್ತಿರವಾದ ವ್ಯಕ್ತಿ ಅಪ್ಪು-ಕೆ ವಿ ಪ್ರಭಾಕರ್
ಬೆಂಗಳೂರು, 04- ನಗರದ ಹೊರವಲಯದಲ್ಲಿರುವ ಕಿಂಗ್ಸ್ ಕ್ಲಬ್ ನಲ್ಲಿ ಅಪ್ಪು ಕಪ್ ಸೀಸನ್-4 ಬ್ಯಾಡ್ಮಿಂಟನ್ ಟೊರ್ನಿಯ
ಉದ್ಘಾಟನೆಯನ್ನು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಬ್ಬ ನಟ ತನ್ನ ನಟನೆಯಿಂದ ಜನರಿಗೆ ಇಷ್ಟ ಆಗುವುದು ಸಹಜ ಅದರಲ್ಲಿ ವಿಶೇಷವೇನೂ ಇರುವುದಿಲ್ಲ.
ಆದರೆ ನಟನೆ ಮತ್ತು ವ್ಯಕ್ತಿತ್ವ ಇವೆರಡರಿಂದಲೂ ಜನರ ಹೃದಯಕ್ಕೆ ಹತ್ತಿರ ಆದವರು ನಮ್ಮ ಪುನೀತರಾಜ್ ಕುಮಾರ್ ಅವರು.
ನಾನು ಸುಮಾರು ಸಲ ಮುಖ್ಯಮಂತ್ರಿಗಳ ಮನೆಯಲ್ಲಿ ಅವರನ್ನ ಭೇಟಿಯಾಗಿರುವೆ. ಅತ್ಯಂತ ಸರಳ ಮತ್ತು ಸೌಜನ್ಯದ ವ್ಯಕ್ತಿತ್ವ ಅವರದ್ದು.
ತಾನೊಬ್ಬ ಸ್ಟಾರ್ ನಟ ಎಂಬುದನ್ನು ವರ್ತನೆಯಲ್ಲಿ ಎಂದೂ ತೋರಿದವರಲ್ಲ ಎಂದು ಪ್ರಭಾಕರ್ ಹೇಳಿದರು.
ಇವತ್ತು ಅಂತಹ ಪುನೀತ ರಾಜ್ ಕುಮಾರ್ ಅವರ ಹೆಸರಲ್ಲಿ ನಾವು-ನಿವೆಲ್ಲ ಸೇರಿ ಬ್ಯಾಡ್ಮಿಂಟನ್ ಹಬ್ಬವನ್ನ ಆಚರಣೆ ಮಾಡುತ್ತಿದ್ದೇವೆ.
ಎಲ್ಲಾ ಆಟಗಾರರಿಗೂ ಒಳ್ಳೆಯದಾಗಲಿ, ಕ್ರೀಡಾ ಸ್ಪೂರ್ತಿಯಿಂದ ಎಲ್ಲರೂ ಭಾಗವಹಿಸಲಿ ಎಂದರು.
ಡಾ.ರಾಜಕುಮಾರ್ ಅಭಿಮಾಬಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ವಿಧಾನ ಪರಿಷತ್ ಸದಸ್ಯ ಸರವಣ, ಟೂರ್ನಿಯ ಆಯೋಜಕರಾದ ಚೇತನ್ ಉಪಸ್ಥಿತರಿದ್ದರು.

