ಬಾಂಗ್ಲಾ ದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಇದೇ ತಿಂಗಳು 19 ರಿಂದ ಶುರುವಾಗಲಿದ್ದು. ಮೊದಲ ಪಂದ್ಯ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡಯಲಿದೆ.
ಬಾಂಗ್ಲಾ ವಿರುದ್ಧದ ಸರಣಿಗೆ ಬಿಸಿಸಿಐ ಈಗಾಗಲೇ 16 ಜನರ ತಂಡವೋದನ್ನು ಪ್ರಕಟ ಮಾಡಿದೆ. ಆ ತಂಡದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ ಪ್ರಮುಖ ಬ್ಯಾಟರ್ ಆಗಿ ಮೊದಲ ಪಂದ್ಯದಿಂದಲೇ ಕಣಕ್ಕಿಳಿಯುವುದು ಖಚಿತ ಎನ್ನಲಾಗುತ್ತಿದೆ.
ಈದೇ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ, ಕೆ. ಎಲ್ ರಾಹುಲ್ ಅವರ ಪ್ರಕಾರ ವಿಶ್ವದ ಪ್ರಮುಖ ಟಾಪ್ ಐದು ಬ್ಯಾಟರ್ ಗಳನ್ನು ಹೆಸರಿಸಿದ್ದಾರೆ.
ಮೊದಲನೆಯದಾಗಿ ಎಲ್ಲರ ನೀರಿಕ್ಷೆಯಂತೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಎಂದು ಹೇಳಿದ್ದಾರೆ. ಎರಡನೆಯದಾಗಿ ನಾಯಕ ರೋಹಿತ್ ಶರ್ಮ ಕೂಡ ವಿಶ್ವದ ಶ್ರೇಷ್ಠ ಕ್ರಿಕೆಟಿಗ ಎಂದು ಹೇಳಿದ್ದಾರೆ.
ಇದಲ್ಲದೆ ಮೂರನೆಯದಾಗಿ ಡ್ಯಾಷಿಂಗ್ ಬ್ಯಾಟ್ಸಮನ್ ಸೂರ್ಯಕುಮಾರ್ ಯಾದವ್, ನಂತರ ಪಾಕಿಸ್ತಾನದ ನಾಯಕ ಬಾಬರ್ ಅಜಂ. ಕೊನೆಯದಾಗಿ ಆಸ್ಟ್ರೇಲಿಯಾದ ಆರಂಭಿಕ ದಾಂಡಿಗ ಟ್ರಾವೀಸ್ ಹೆಡ್ ಕೂಡ ನನ್ನ ಪ್ರಕಾರ ವಿಶ್ವದ ಟಾಪ್ ಐದು ಆಟಗಾರರ ಪಟ್ಟಿಯಲ್ಲಿ ಬರುತ್ತಾರೆಂದು ಕೆ. ಎಲ್ ರಾಹುಲ್ ತಿಳಿಸಿದ್ದಾರೆ.