ರಾಜಕೀಯ ಸುದ್ದಿ

ಬುಲ್ಡೋಜರ್ ಕ್ರಮ ಸರಿಯಲ್ಲ ಎಂದ ಸುಪ್ರಿಂ ಕೋಟ್೯

Share It

ನವದೆಹಲಿ: ಒಬ್ಬ ವ್ಯಕ್ತಿ ಪ್ರಕರಣದಲ್ಲಿ ಆರೋಪಿ ಎಂಬ ಕಾರಣಕ್ಕೆ ಬುಲ್ಡೋಜರ್ ಅನ್ನು ಆತನ ಮನೆಯ ಮೇಲೆ ಬಳಸುವುದು ಎಷ್ಟು ಸರಿ ಎಂದು ಸುಪ್ರಿಂಕೋಟ್೯ ಪ್ರಶ್ನಿಸಿದೆ.

ಗುಜರಾತ್‌ನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಬುಲ್ಡೋಜರ್ ನ್ಯಾಯದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಒಬ್ಬ ವ್ಯಕ್ತಿ ಪ್ರಕರಣದಲ್ಲಿ ಆರೋಪಿ ಎಂಬ ಕಾರಣಕ್ಕೆ ಬುಲ್ಡೋಜರ್ ಅನ್ನು ಆತನ ಮನೆಯ ಮೇಲೆ ಬಳಸಬಹುದಾ ಎಂದು ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರ ಪೀಠ ಕೇಳಿದೆ. ಆರೋಪಿ ತಪ್ಪಿತಸ್ಥನೋ ಇಲ್ಲವೋ ಎಂಬುದನ್ನು ನ್ಯಾಯಲಯ ನಿರ್ಧರಿಸುತ್ತದೆ ಹೊರತು ಸರ್ಕಾರ ಅಲ್ಲ ಎಂದು ಹೇಳಿದೆ.

ಇಂತಹ ಬುಲ್ಡೋಜರ್ ಕ್ರಮವನ್ನು ನ್ಯಾಯಾಲಯ ನಿರ್ಲಕ್ಷಿಸುವುದಿಲ್ಲ. ಅಂತಹ ಕ್ರಮಕ್ಕೆ ಅವಕಾಶ ನೀಡುವುದು ಕಾನೂನಿನ ನಿಯಮದ ಮೇಲೆ ಬುಲ್ಡೋಜರ್ ಓಡಿಸಿದಂತಾಗುತ್ತದೆ. ಅಪರಾಧದಲ್ಲಿ ಭಾಗಿಯಾಗಿರುವುದು ಯಾವುದೇ ಆಸ್ತಿಯನ್ನು ಕೆಡವಲು ಆಧಾರವಲ್ಲ ಎಂದು ಹೇಳಿದೆ.

ಗುಜರಾತ್‌ನ ಜಾವೇದ್ ಅಲಿ ಎಂಬ ಅರ್ಜಿದಾರರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್‌ನಿಂದಾಗಿ ಅವರ ಮನೆಯನ್ನು ಕೆಡವಲು ನಗರಸಭೆಯಿಂದ ನೋಟಿಸ್ ಅಥವಾ ಬೆದರಿಕೆ ಹಾಕಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಅರ್ಜಿದಾರರ ಪ್ರಕಾರ, 2024ರ ಸೆಪ್ಟೆಂಬರ್ 1ರಂದು ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲು ಬಂದಾಗ, ಪುರಸಭೆಯ ಅಧಿಕಾರಿಗಳು ಅರ್ಜಿದಾರರ ಕುಟುಂಬದ ಮನೆಯನ್ನು ಬುಲ್ಡೋಜರ್‌ನಿಂದ ಕೆಡವುವುದಾಗಿ ಬೆದರಿಕೆ ಹಾಕಿದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪಾಲಿಕೆ ಹಾಗೂ ಸ್ಥಳೀಯ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.


Share It

You cannot copy content of this page