ಬೆಂಗಳೂರು: ರಾಜಧಾನಿಯಲ್ಲಿ ನೂತನವಾಗಿ ಆರಂಭವಾಗಿರುವ ಉತ್ತರ ಭಾರತೀಯ ಖಾದ್ಯಗಳ ರೆಸ್ಟೋರೆಂಟ್ ಲಕ್ನೋವಿ ರೆಸ್ಟೋರೆಂಟ್ ಅನ್ನು ಮಿಸ್ ಅರ್ಥ್ ಭವ್ಯಾ ಗೌಡ ಉದ್ಘಾಟನೆ ಮಾಡಿದರು.
ಸರ್ಜಾಪುರ ಸಮೀಪದ ಕಸುವನಹಳ್ಳಿಯಲ್ಲಿ ಹೊಸ ರೆಸ್ಟೋರೆಂಟ್ ಉದ್ಘಾಟನೆಯಾಗಿದ್ದು, ರೆಸ್ಟೋರೆಂಟ್ ಉತ್ತರ ಭಾರತೀಯ ತಿನಿಸುಗಳನ್ನು ಅತ್ಯಂತ ರುಚಿಕಟ್ಟಾದ ರೀತಿಯಲ್ಲಿ ಗ್ರಾಹಕರಿಗೆ ಒದಗಿಸುವಿಕೆಗೆ ಹೆಸರುವಾಸಿಯಾಗಿದೆ.
ರೆಸ್ಟೋರೆಂಟ್ ಉದ್ಘಾಟನೆಯನ್ನು ಭವ್ಯಾ ಗೌಡ ಉದ್ಘಾಟನೆ ಮಾಡಿದ್ದು, ಇವರು ಮಿಸ್ ಅರ್ಥ್ ಪ್ರಶಸ್ತಿ ಪಡೆದಿರುವ ಮಾಡೆಲ್ ಆಗಿದ್ದಾರೆ. ತಮ್ಮಿಷ್ಟದ ತಿನಿಸುಗಳನ್ನು ಸವಿಯಲು ಸರ್ಜಾಪುರದಲ್ಲಿ ಉದ್ಘಾಟನೆಯಾಗಿರುವ ರೆಸ್ಟೋರೆಂಟ್ ಸೂಕ್ತ ಸ್ಥಳವಾಗಿದೆ ಎಂದು ಭವ್ಯಾ ಗೌಡ ತಿಳಿಸಿದ್ದಾರೆ.