ಅಪರಾಧ ರಾಜಕೀಯ ಸುದ್ದಿ

ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷನ ಮೇಲೆ ಹಲ್ಲೆ: ಬಿಜೆಪಿ ಮಾಜಿ ಶಾಸಕ ಚರಂತಿಮಠ ವಿರುದ್ಧ ಎಫ್‌ಐಆರ್

Share It

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷನ ಮೇಲೆ ಹಲ್ಲೆ ಆರೋಪಕ್ಕೆ ಸಂಬAಧಿಸಿದAತೆ ಬಿಜೆಪಿಯ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮತ್ತರಗಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಚರಂತಿಮಠ ಮತ್ತು ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಆನಂದ ಮತ್ತರಗಿ ನೀಡಿದ ದೂರಿನ ಮೇರೆಗೆ ಬಾಗಲಕೋಟೆ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೀಳೂರು ಬಸವೇಶ್ವರ ಸಹಕಾರ ಸಂಘದಿAದ ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮತ್ತರಗಿ ೩೫ ಲಕ್ಷ ಸಾಲ ಪಡೆದಿದ್ದು, ೨೦೧೮ರಿಂದ ಸಾಲ ಮರುಪಾವತಿ ಮಾಡದೆ ಕಳ್ಳಾಟ ಆಡುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ದೂರು ನೀಡಲಾಗಿದೆ ಎಂದು ಚರಂತಿಮಠ ತಿಳಿಸಿದ್ದಾರೆ.


Share It

You cannot copy content of this page