ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆಗೆ ಮತ್ತೊಂದು ಹಿನ್ನಡೆ ಉಂಟಾಗಿದ್ದು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರು ರಾಜೀನಾಮೆ ಕೊಡುವುದು ಮತ್ತಷ್ಟು ವಿಳಂಬ ವಾಗುವ ಸಾಧ್ಯತೆಯಿದೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ತೀರ್ಮಾನಿಸಿದ್ದು ರಾಜ್ಯಪಾಲರ ಭೇಟಿಗೆ ನಿರ್ಧರಿಸಿದ್ದಾರೆ. ಆದರೆ ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲ. ಅವರು ನಾಗಪುರ ಪ್ರವಾಸದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕಾರ್ಯದರ್ಶಿಗಳಿಗೆ ರಾಜೀನಾಮೆ ಕೊಡಬೇಕಾಗುತ್ತದೆ. ಇಂದು ಬಕ್ರೀದ್ ಹಬ್ಬದ ರಜೆಯ ಕಾರಣ ಕಾರ್ಯದರ್ಶಿಗಳು ಕೂಡ ಲೋಕಭವನದಲ್ಲಿ ಇರುವುದಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ ಪ್ರಕಟ ಮಾಡಿದ್ದೇ ಆದರೆ ಅವರು ಲೋಕಭವನಕ್ಕೆ ಬಂದು ರಾಜೀನಾಮೆ ಪಡೆಯುವ ಪ್ರಕ್ರಿಯೆ ನಡೆಯುತ್ತಾರೆ.
ಅದರೆ, ಈವರೆಗೆ ಕಾರ್ಯದರ್ಶಿಗಳಿಗೆ ಇಂತಹ ಮಾಹಿತಿ ರವಾನೆ ಯಾಗಿಲ್ಲ ಎನ್ನಲಾಗಿದೆ. ಒಂದು ವೇಳೆ ಕಾರ್ಯದರ್ಶಿಗಳಿಗೆ ರಾಜೀನಾಮೆ ನೀಡಿದರೂ ಅಂಗೀಕಾರಕ್ಕೆ ರಾಜ್ಯಪಾಲರ ಆಗಮನ ಅನಿವಾರ್ಯ. ರಾಜ್ಯಪಾಲರು ಬರುವುದು ನಾಳೆ ಸಂಜೆಯಾಗಬಹುದು ಎನ್ನಲಾಗಿದೆ.
ಅನಂತರ ರಾಜ್ಯಪಾಲರು ಸಿಎಂ ಅವರನ್ನು ಕರೆಸಿಕೊಂಡು

