ಉಪಯುಕ್ತ ಸುದ್ದಿ

ಜನನಿ ಸೇವಾ ಫೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಕುರುವಂಕ ಶಾಲೆಯಲ್ಲಿ ಕಾರ್ಯಕ್ರಮ

Share It

ಚನ್ನರಾಯಪಟ್ಟಣ: ಜನನಿ ಸೇವಾ ಫೌಂಡೇಶನ್ ಸಂಸ್ಥೆಯ ವತಿಯಿಂದ ದಿನಾಂಕ: 06/07/2026ನೇ ಸೋಮವಾರ ವಿಶ್ವ ಪರಿಸರ ದಿನದ ಅಂಗವಾಗಿ ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಕುರುವಂಕ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಗಿಡಗಳನ್ನು ವಿತರಿಸುವುದು, ನೋಟ್ ಬುಕ್, ಪೆನ್ , ಪೆನ್ಸಿಲ್ ಮತ್ತು ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ R ಕುರುವಂಕ ರವರು ಪರಿಸರ ಸಂರಕ್ಷಣೆ ಹಾಗೂ ಶೈಕ್ಷಣಿಕವಾಗಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು ಹಾಗೂ ಉಳಿಯಬೇಕು ಅವುಗಳು ಉಳಿದರೆ ಬಡವರಿಗೆ ವಿದ್ಯೆ ಸಿಗುತ್ತದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ R ಕುರುವಂಕ, ಉಪಾಧ್ಯಕ್ಷರಾದ ರುದ್ರೇಶ್ ಬಾಲಚಂದ್ರನ್ರವರು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜೆ, ಕಾರ್ಯದರ್ಶಿ ರಮೇಶ್ B M, ಖಜಾಂಚಿ ವಿನೋದ್ ಪ್ರಸಾದ್ H M ಭಾಗವಹಿಸಿದ್ದರು. ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯಾದ ಕಮಲಮ್ಮ ರವರು, SDMC ಅಧ್ಯಕ್ಷರಾದ ಧನಲಕ್ಷ್ಮಿ ರವರು, ಗ್ರಾಮದ ಮುಖಂಡರಾದ ಗಂಗಾಧರ್ ರವರು, ಸಿದ್ದೇಗೌಡ ರವರು ಮತ್ತು ಎಲ್ಲಾ ವಿದ್ಯಾರ್ಥಿಗಳ ಪೋಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.


Share It

You cannot copy content of this page