ಸುದ್ದಿ

ನೀವು ನಕ್ಕೇ ನಗ್ತೀರಾ: ಮದರ್ ಫ್ರಾಮಿಸ್ !

Share It

ಕನ್ನಡದಲ್ಲಿ ಸಿನಿಮಾಗಳ ಕೊರತೆ ಇದೆ ಅಂದವರಿಗೆ ಮದರ್ ಪ್ರಾಮಿಸ್ ಈ ವಾರ ಆ ಕೊರತೆ ನೀಗಿದೆ. ಇದನ್ನ ತೆರೆಯಲ್ಲಿ ಡಾಲಿ ಧನಂಜಯ ಅವರೇ ಹೇಳುತ್ತಿದ್ದಾರೆ. ಹೌದು ಹೊಸತನದ ಕಥೆಯ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ಈ ವಾರ ತೆರೆಗೆ ಬಂದಿರುವ ಮದರ್ ಪ್ರಾಮಿಸ್ ಚಿತ್ರ ಹೊಸತನವನ್ನು ತಂದುಕೊಟ್ಟಿದೆ. ತೆರೆಯಲ್ಲಿ ಚಿತ್ರ ನೋಡುತ್ತಿದ್ದರೆ ಸಿನಿಮಾ ಅಂದ್ರೆ ಹೀಗಿರಬೇಕು ಅನ್ನಿಸದೇ ಇರದು. ಸಿನಿಮಾದ ಶೀರ್ಷಿಕೆ ಕೇಳಿ ಇಲ್ಲಿ ಇಂತಹದ್ದೇ ಕಥೆ ಎಂದು ನಿರ್ಧರಿಸುವುದು ಕಷ್ಟವೆ.

ರಾಸಿಗೆ ಬೈಕ್ ರೇಸ್ ಕ್ರೇಜ್ ತನ್ನ ಬಳಿ ಇರುವ ಸ್ಲೆಂಡರ್ ಬೈಕ್‌ನಲ್ಲಿ ರೇಸ್‌ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾನೆ. ಆದರೆ ಒಂದು ದಿನ ಆತನ ನೆಚ್ಚಿನ ಬೈಕ್ ಕಳೆದು ಹೋಗುತ್ತದೆ. ಬೈಕ್ ಜತೆಗೆ ಭಾವನಾತ್ಮಕ ನಂಟು ಬೆಳೆಸಿಕೊಂಡಿದ್ದ ರಾಸಿ ಇದರಿಂದ ಕುಗ್ಗುತ್ತಾನೆ. ಅದಕ್ಕಾಗಿ ಹುಡುಕಾಟ ಸಾಗುತ್ತದೆ.

ಮತ್ತೊಂದೆಡೆ ಅಲ್ಲೊಬ್ಬ ಡಾನ್ ಅತಿಯಾಸೆಗೆ ಬಿದ್ದು, ಬೆಟ್ಟಿಂಗ್ ದಂಧೆಯಲ್ಲಿ ಲಕ್ಷಾಂತರ ರು. ಹಣ ಕಳೆದುಕೊಂಡಿರುತ್ತಾನೆ. ಆ ಹಣವನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿರುತ್ತಾನೆ. ಮತ್ತೊಬ್ಬ ದೊನ್ನೆ ಬಿರಿಯಾನಿಯವನ ಕಥೆ. ಹೀಗೆ ಒಂದೊಂದು ಕಥೆಯೂ ಒಂದಕ್ಕೊಂದು ಹೊಂದುಕೊಂಡಂತೆ ಸಾಗುತ್ತದೆ. ಅದು ಹೇಗೆ ಅನ್ನುವುದನ್ನು ಸಿನಿಮಾ ನೋಡಿಯೇ ತಿಳಿಯಬೇಕು. ಇಲ್ಲಿ ಗ್ಯಾಂಗ್‌ಸ್ಟರ್ ಕಥೆ ಇದೆ. ಆದರೆ, ಇಲ್ಲಿ ಗ್ಯಾಂಗ್‌ಸ್ಟರ್‌ಗಳ ಹೊಡೆದಾಟ ಬಡಿದಾಟವಿಲ್ಲ. ಅವರೆಲ್ಲರೂ ತೆರೆಯಲ್ಲಿ ನಗುವಿನ ಕಚಗುಳಿ ಇಡುತ್ತಾರೆ. ಇಲ್ಲಿ ನಗುವೇ ಪ್ರಧಾನವಾದರೂ ಅದರ ಜತೆಗೆ ಒಂದಷ್ಟು ಥ್ರಿಲ್ಲರ್, ಸಸ್ಪೆನ್ಸ್‌, ಸೆಂಟಿಮೆಂಟ್ ಅಂಶಗಳು ಕೂಡ ಬೆರೆತಿವೆ.

ಡಾಲಿ ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್‌ನಲ್ಲಿ ಮನಗೆಲ್ಲುತ್ತಾರೆ. ತೆರೆಯಲ್ಲಿ ಅವರ ಪಾತ್ರವನ್ನು ನೋಡುವುದೇ ಚೆಂದ. ಮಹಾದೇವ್ ಪ್ರಸಾದ್, ಪೂರ್ಣಚಂದ್ರ ಮೈಸೂರು ಅವರ ಪಾತ್ರಗಳು ಅದ್ಭುತವಾಗಿ ಮೂಡಿಬಂದಿವೆ. ವಿಭಿನ್ನವಾದ ಕಥೆಯನ್ನು ಅಷ್ಟೇ ಸೊಗಸಾಗಿ ಎಲ್ಲರಿಗೂ ಹಿತ ಅನ್ನಿಸುವಂತೆ ತೆರೆಯಲ್ಲಿ ಕಟ್ಟಿಕೊಡುವಲ್ಲಿ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಯಶಸ್ವಿಯಾಗಿದ್ದಾರೆ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ. ಚಿತ್ರದ ಸಂಗೀತ ಕಾಮಿಡಿ ಕಥೆಗೆ ಪೂರಕವಾಗಿದೆ, ಅಂತೆಯೇ ಛಾಯಾಗ್ರಹಣಕ್ಕೂ ಫುಲ್ ಮಾರ್ಕ್ಸ್‌ ನೀಡಬಹುದಾಗಿದೆ. ಚಿತ್ರದ ರಗಸದಅ…ಹಾಡು ಸಿನಿಮಾ ನೋಡಿ ಹೊರಬಂದ ಮೇಲೂ ಮನದಲ್ಲಿ ಗುನುಗುನಿಸುತ್ತದೆ. ಒಟ್ಟಾರೆ ಮದರ್ ಪ್ರಾಮಿಸ್‌ನಲ್ಲಿ ಲಾಜಿಕ್‌ಗಿಂದ ಕಾಮಿಡಿ ಮ್ಯಾಜಿಕ್ ಮಾಡಿದೆ.


Share It

You cannot copy content of this page