ಸುದ್ದಿ

ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ 5 ಲಕ್ಷ ಅಡ್ವಾನ್ಸ್ : ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ !

Share It

ಬೆಂಗಳೂರು: ಬೆಂಗಳೂರು ಬಾಡಿಗೆದಾರರ ಪಾಲಿಗೆ ಎಷ್ಟೊಂದು ದುಬಾರಿ ಅನ್ನೋದು ಎಲ್ಲರಿಗೂ ಗೊತ್ತಿದೆ‌. ಆದರೆ, 40 ಸಾವಿರ ಬಾಡಿಗೆ ಮನೆಗೆ 5 ಲಕ್ಷ ಅಡ್ವಾನ್ಸ್ ಕೇಳಿದ ಕಾರಣಕ್ಕೆ ಇದೀಗ ಈ ವಿಷಯ ರಾಷ್ಟ್ರೀಯ ಚರ್ಚೆಯಾಗುತ್ತಿದೆ.

ಹರ್ನೀದ್ ಕೌರ್ ಎಂಬ ಮಹಿಳೆ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಇದು ರಾಷ್ಟ್ರಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ತಮಗೆ ಬೇಕಾದ ಪ್ಲಾಟ್ ವೊಂದನ್ನು ಕೌರ್ ಬಾಡಿಗೆಗೆ ಕೇಳಿದ್ದರು. 40 ಸಾವಿರ ರು. ತಿಂಗಳ ಬಾಡಿಗೆಯ ಈ ಪ್ಲಾಟ್ ಗೆ ಮಾಲೀಕರು 5 ಲಕ್ಷ ಅಡ್ವಾನ್ಸ್ ಕೇಳಿದ್ದರು.

5 ರಿಂದ 10 ಸಾವಿರದವರೆಗೆ ಬಾಡಿಗೆ ಇದ್ದರೆ ಸಾಮಾನ್ಯವಾಗಿ ಹತ್ತು ತಿಂಗಳ ಬಾಡಿಗೆ ಮುಂಗಡ ಪಡೆಯುವುದು ವಾಡಿಕೆ. ಅದಕ್ಕಿಂತ ಹೆಚ್ಚು ಬಾಡಿಗೆಯಿದ್ದಲ್ಲಿ ಒಂದಷ್ಟು ಪಟ್ಟು ಜಾಸ್ತಿ ಲೆಕ್ಕಾಚಾರದಲ್ಲಿ ಅಡ್ವಾನ್ಸ್ ಪಡೆಯಲಾಗುತ್ತದೆ. ಆದರೆ, ಒಂದು ವರ್ಷದ ಬಾಡಿಗೆಗೂ ಹೆಚ್ಚಿದ ಅಡ್ವಾನ್ಸ್ ಕೇಳಿದ ಕಾರಣಕ್ಕೆ ಕೌರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬಾಡಿಗೆದಾರರನ್ನು ಈ ರೀತಿ ಗೋಳು ಹುಯ್ದುಕೊಳ್ಳುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಬಾಡಿಗೆಗೆ ಮನೆ ನೀಡುವ ಸಲುವಾಗಿ ಕೆಲ ಕಾನೂನುಗಳನ್ನು ರೂಪಿಸಿದ್ದರೂ ಕೂಡ ಅದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ. ಮಾಲೀಕರು ಹೇಳಿದಷ್ಟು ಬಾಡಿಗೆ ಮತ್ತು ಅಡ್ವಾನ್ಸ್ ಕೊಟ್ಟು ಜೀವನ ನಡೆಸುವುದು ಜನರಿಗೆ ರೂಢಿಯಾಗಿದೆ.

ಈ ನಡುವೆ ಮಾಲೀಕರ ಇಂತಹ ವರ್ತನೆಯ ಬಗ್ಗೆ ಉತ್ತರ ಭಾರತದ ಮಹಿಳೆಯೊಬ್ಬರು ಆಕ್ಷೇಪ ತೆಗೆಯುತ್ತಿದ್ದಂತೆ ಆ ಟ್ವೀಟ್ ಟ್ರೆಂಡ್ ಆಗಿದೆ. ಲಕ್ಷಾಂತರ ವೀಕ್ಷಣೆಯಾಗಿದ್ದು, ಸಾವಿರಾರು ಜನ ಇದಕ್ಎ ಕಮೆಂಟ್ ಮಾಡಿದ್ದಾರೆ. ದೆಹಲಿಯಲ್ಲಿ ಎರಡು ಅಥವಾ ಮೂರು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯಲಾಗುತ್ತದೆ. ಆದರೆ, ಇಲ್ಲಿ 5 ಲಕ್ಷ ಕೇಳುತ್ತಿರುವುದು ಅಚ್ಚರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

https://x.com/harnidhish/status/1855971673939325156?t=RaW0tGotYDl7azg9NVPQEw&s=19

ಮತ್ತೊಬ್ಬರು ಕಮೆಂಟ್ ಮಾಡಿ, ಒಂದು ವರ್ಷದ ಬಾಡಿಗೆಯನ್ನು ಅಡ್ವಾನ್ಸ್ ಆಗಿ ಪಡೆದರೂ 4.8 ಲಕ್ಷ ಆಗುತ್ತದೆ. ಆದರೆ, 5 ಲಕ್ಷ ಕೇಳಿರುವುದು ಯಾವ ಲೆಕ್ಕಾಚಾರ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಮಹಿಳೆ ಮಾಡಿರುವ ಟ್ವೀಟ್ ಗೆ ವಿಧವಿಧದ ಕಮೆಂಟ್ ಗಳು ಬಂದಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.


Share It

You cannot copy content of this page