ಹೊಸದಿಲ್ಲಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಬುಧವಾರ ಪ್ರಕಟಗೊಂಡಿದ್ದು, ಪಟ್ಟಿಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳೆರಡರಲ್ಲೂ ಸೇರಿ ಮೊದಲ ಹತ್ತು ಆಟಗಾರರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ 6 ಆಟಗಾರರು ಕಾಣಿಸಿಕೊಂಡಿದ್ದಾರೆ.
ಕಳೆದ ಪೆಬ್ರವರಿಯಿಂದ ಇಲ್ಲಿಯವರೆಗೂ ಟೀಮ್ ಇಂಡಿಯಾ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ ಆದರೂ ಸಹ ಟೀಮ್ ಇಂಡಿಯಾದ ಆಟಗಾರರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಪ್ರಕಟಗೊಂಡಿರುವ ಬ್ಯಾಟರ್ ವಿಭಾಗದ ಪಟ್ಟಿಯಲ್ಲಿ ಇಂಗ್ಲೆಂಡ್ ನ ಬ್ಯಾಟರ್ ಜೋ ರೂಟ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಇದ್ದಾರೆ. ಅದುಬಿಟ್ಟರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ 5ನೇ ಸ್ಥಾನದಲ್ಲಿ, ಯಶಸ್ವಿ ಜೈಸ್ವಾಲ್ 6ನೇ ಸ್ಥಾನ ಮತ್ತು ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿ ಇದ್ದಾರೆ.
ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಸ್ಥಾನದಲ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಎರಡನೇ ಸ್ಥಾನದಲ್ಲಿ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ 7ನೇ ಸ್ಥಾನದಲ್ಲಿದಾರೆ.
ಐಸಿಸಿ ಪ್ರಕಟಗೊಳಿಸಿದ ಟಾಪ್ 10 ಟೆಸ್ಟ್ ಬ್ಯಾಟರ್ ಗಳು :
- ಜೋ ರೂಟ್ (ಇಂಗ್ಲೆಡ್ )
- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್ )
- ಡೇರೆಲ್ ಮಿಚೆಲ್(ನ್ಯೂಜಿಲೆಂಡ್ )
- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
- ರೋಹಿತ್ ಶರ್ಮಾ (ಭಾರತ)
- ಯಶಸ್ವಿ ಜೈಸ್ವಾಲ್ (ಭಾರತ)
- ವಿರಾಟ್ ಕೊಹ್ಲಿ (ಭಾರತ)
- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)
- ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)
- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)
ಐಸಿಸಿ ಪ್ರಕಟಗೊಳಿಸಿದ ಟಾಪ್ 10 ಟೆಸ್ಟ್ ಬೌಲರ್ ಗಳು
01.ಆರ್. ಅಶ್ವಿನ್ (ಭಾರತ)
02.ಜಸ್ಪ್ರೀತ್ ಬುಮ್ರಾ (ಭಾರತ)
03.ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)
04.ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)
05.ಕಗಿಸೊ ರಬಾಡ (ಸೌತ್ ಆಫ್ರಿಕಾ)
06.ನಾಥನ್ ಲಿಯಾನ್ (ಆಸ್ಟ್ರೇಲಿಯಾ)
07.ರವೀಂದ್ರ ಜಡೇಜಾ (ಭಾರತ)
08.ಕೈಲ್ ಜೇಮಿಸನ್ (ನ್ಯೂಝಿಲೆಂಡ್)
09.ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್)
10.ಶಾಹಿನ್ ಅಫ್ರಿದಿ (ಪಾಕಿಸ್ತಾನ್)