ಉಪಯುಕ್ತ ಸುದ್ದಿ

ತಿರುಪತಿಯಲ್ಲಿ ನೀರಿನ ಕೊರತೆ: ಕರ್ನಾಟಕ ಭವನದ ಬುಕಿಂಗ್ ಸ್ಥಗಿತ

Share It

ಬೆಂಗಳೂರು: ತಿರುಪತಿಯ ತಿರುಮಲ ಕ್ಷೇತ್ರದಲ್ಲಿ ನೀರಿನ ಕೊರತೆ ಹೆಚ್ಚಾಗಿದ್ದು, ಕರ್ನಾಟಕ ಭವನದಲ್ಲಿ ಪ್ರವಾಸಿಗರಿಗೆ ಬುಕಿಂಗ್ ಸ್ಥಗಿತಗೊಳಿಸಲಾಗಿದೆ.

ಕರ್ನಾಟಕ ಭವನದ ಮೂರು ಬ್ಲಾಕ್ ಗಳಲ್ಲಿ 350 ಕೊಠಡಿಗಳು ಮತ್ತು 12 ಡೆಮಿಟ್ರಿಗಳು ಕಾರ್ಯನಿರ್ವಹಿಸುತ್ತಿದ್ದು, ನೀರಿನ ಕೊರತೆ ಹಿನ್ನೆಲೆಯಲ್ಲಿ ಬುಕಿಂಗ್ ಸ್ಥಗಿತ ಮಾಡಲಾಗಿದೆ. ಈಗಾಗಲೇ ಬುಕಿಂಗ್ ಆಗಿದ್ದ ಪ್ರವಾಸಿಗರಿಗಷ್ಟೇ ವಾಸ್ತವ್ಯಕ್ಕೆ ಅವಕಾಶ ಒದಗಿಸಲಾಗಿದೆ. ರಾಜ್ಯದಿಂದ ರೂಮ್ ಬುಕಿಂಗ್ ಗೆ ನೀಡುತ್ತಿದ್ದ ಶಿಫಾರಸು ಪತ್ರಗಳನ್ನು ನಿಲ್ಲಿಸಲಾಗಿದೆ.

ರತ್ನಗಿರಿ ಅಣೆಕಟ್ಟು ಸೇರಿದಂತೆ ತಿರುಮಲ ದೇವಸ್ಥಾನಕ್ಕೆ ನೀರು ಒದಗಿಸುವ ನೀರಿನ ಮೂಲಗಳು ಬತ್ತಿ ಹೋಗಿದ್ದು, ನೀರಿನ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಕಡಿತಗೊಳಿಸುವ ಪ್ರಯತ್ನವನ್ನು ಟಿಟಿಡಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆ ನಿರ್ವಹಣೆ ಮಾಡುವ ಕರ್ನಾಟಕ ಭವನದಲ್ಲಿ ಬುಕಿಂಗ್ ನಿಲ್ಲಿಸಲಾಗಿದೆ


Share It

You cannot copy content of this page