ರಾಜಕೀಯ ಸುದ್ದಿ

ಅಣ್ಣಿಗೇರಿ: ಮತದಾರರ  ಪಟ್ಟಿ ಸಮಗ್ರ ಪರಿಷ್ಕರಣೆ: ಸಾರ್ವಜನಿಕ ಅರಿವು ಮೂಡಿಸಲು ಕಾಲ್ನಡಿಗೆ ಜಾಥಾ.

Share It

ವರದಿ: ಮಹಾಂತೇಶ ಅಕ್ಕರಕಿ

ಅಣ್ಣಿಗೇರಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) – 2026ರ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಜಾಗೃತಿ ಜಾಥಾವನ್ನು ಆಯೋಜಿಸಲಾಗಿದೆ ಎಂದು ಅಣ್ಣಿಗೇರಿ  ತಹಶಿಲ್ದಾರರ  ಮಂಜುನಾಥ ದಾಸಪ್ಪನವರ  ಹಾಗೂ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ ಹೇಳಿದರು.

ಸೋಮವಾರ ನಗರದ ಹಿರಿ ಹನುಮಂತ ದೇವಸ್ಥಾನ  ಕುರುಬಗೇರಿಯಿಂದ  ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ (SVEEP) ಸಮಿತಿ ಧಾರವಾಡ ಹಾಗೂ ತಾಲೂಕು ಆಡಳಿತ ಅಣ್ಣಿಗೇರಿ ಪುರಸಭೆ ಅಣ್ಣಿಗೇರಿ ಇವರ ಸಂಯಕ್ತಾಶ್ರಯದಲ್ಲಿ ಆಯೋಜಿಸಿದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಜಾಥಾ ಕಾರ್ಯಕ್ರಮಕ್ಕೆ ಅಣ್ಣಿಗೇರಿ  ದಾಸೋಹ ಮಠದ ಶೋ ಬ್ರ ಡಾ॥ಶಿವಕುಮಾರ ಮಹಾಸ್ವಾಮಿಗಳು ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಅವರು ಭಾರತ ಸರ್ಕಾರದ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪರಿಷ್ಕರಣೆಯಲ್ಲಿ ತಾಲೂಕಿನ ಸಾರ್ವಜನಿಕರು ಭಾಗಿ ಯಾಗಿ ಮನೆ ಮನೆಗೆ ಬಂದಂತಹ ಅಧಿಕಾರಿಗಳಿಗೆ ಸಮಗ್ರ ಮಹಾತಿ ನೀಡಿ ನಿಮ್ಮ ಚುನಾವಣಾ ಮತದಾನದ ಪರಿಸ್ಕರಣಿಗೆ ಕೈ ಜೋಡಿಸಬೇಕೆಂದರು.

ನಂತರ ತಹಶಿಲ್ದಾರರ  ಮಂಜುನಾಥ ದಾಸಪ್ಪನವರ ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 2026ರ ಜೂನ್ 30ರಿಂದ ಜುಲೈ 30ರವರೆಗೆ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಮತ್ತು ಅರ್ಹರಾದ ಪ್ರತಿಯೊಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ತಹಶಿಲ್ದಾರರ ಅಧಿಕಾರಿಗಳು ಪಂಚಾಯತ ಅಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಜಿಲ್ಲಾ ಸ್ವೀಪ್ ಸಮಿತಿ ರವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, (S.I.R) ದಿನಾಂಕ: 30-06-2026 ರಿಂದ 29-07-2026 ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿ (BLOs) ಗಳಿಂದ ಮನೆ ಮನೆ ಭೇಟಿ ನೀಡಿ Enumeration Form & Declaration Form, (ಗಣತಿದಾರರ ನಮೂನೆಯನ್ನು ದ್ವಿಪ್ರತಿಯಲ್ಲಿ ನೀಡಲು ತಿಳಿಸಿದರು. 

ಹಾಗೂ ದೋಷರಹಿತ ಮತದಾರರ ಪಟ್ಟಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಮಾತನಾಡಿದರು

ನಂತರ ಮತದಾರರ ಪಟ್ಟಿ ಪರಿಸ್ಕರಣಿ ಜಾಥಾ ಕಾರ್ಯಕ್ರಮವನ್ನು ಉದ್ಧೆಶಿಸಿ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳ ಬಗ್ಗೆ ಎಚ್ಚರಿಕೆ ಅಗತ್ಯ. ಈ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಹಾಗೂ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ತಿಳಿಸಿದರು.

ವಿಶೇಷ ಸಮಗ್ರ ಪರಿಷ್ಕರಣೆ,SPECIAL INTENSIVE REVISION (S.I.R) ಕುರಿತು ಅಣ್ಣಿಗೇರಿ  ತಾಲೂಕು ಮತದಾರರ ಪಟ್ಟಿಯ ಕುರಿತು ತಾಲೂಕು ಆಡಳಿತ  ಹಾಗೂ ಜಿಲ್ಲಾ ಸ್ವೀಪ್ ಸಮಿತಿ,ಹಾಗೂ ಶಾಲಾ ಕಾಲೇಜು ವಿಧ್ಯಾರ್ಥಿಗಳ ಸಮ್ಮುಖದಲ್ಲಿ  ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(S.I.R), ಕುರಿತು ಅರಿವು ಮೂಡಿಸಲು ಕುರುಬಗೇರೆಯಿಂದ  ದಾಸೋಹ ಮಠ.ಕಿತ್ತೂರ ರಾಣಿ ಚನ್ನಮ್ಮ ವೃತ್ತ , ಜಾಡಗೇರೆ ಸ್ವಾಮಿ ವಿವೇಕಾನಂದ ವೃತದಿಂದ   ಪುರಸಭೆ  ಕಛೇರಿ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು

ದೇಶದಲ್ಲಿ ಇದು ಮೂರನೇ ಹಂತದ ಮತದಾರರ ಪರಿಷ್ಕರಣೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು೨ ಅದರ ಕುರಿತಾದ ಜಾಗೃತಿ ಅಭಿಯಾನದ ಕುರಿತು ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಜಾಗೃತಿ ಫಲಕಗಳನ್ನು ಹಿಡಿದು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ  ಅಣ್ಣಿಗೇರಿ  ದಾಸೋಹ ಮಠದ ಶೋ ಬ್ರ ಡಾ॥ಶಿವಕುಮಾರ ಮಹಾಸ್ವಾಮಿಗಳು ತಹಶಿಲ್ದಾರರ ಮಂಜುನಾಥ ದಾಸಪ್ಪನವರ  ಮುಖ್ಯಾಧಿಕಾರಿಯಾದ ವಾಯ್ ಜಿ ಗದ್ದಿಗೌಡರ.ಕಂದಾಯ ಇಲಾಖೆ ಅಧಿಕಾರಿ ರಿಷಿ ಸಾರಂಗಿ.ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ.ಉಪಾಧ್ಯಕ್ಷ ನಾಗರಾಜ ದಳವಾಯಿ.ಷಣ್ಮುಖ ಗುರಿಕಾರ.ಸಿ ಜಿ ನಾವಳ್ಳಿ. ಮಾರುತಿ ಕಾಳೆ.ರಮೇಶ ಕರೆಟ್ಟನವರ.ನಿಂಗಪ್ಪ ಕುರಹಟ್ಟಿ.ಬಸವರಾಜ ಯಳವತ್ತಿ.ಸಕ್ರಪ್ಪ ಪಲ್ಲೇದ. ಹಾಗೂ ತಾಲೂಕು ಇಲಾಖೆ ಪುರಸಭೆಯ ಅಧಿಕಾರಿಗಳು ಹಾಗೂ ಶಾಲಾ ಕಾಲೇಜ ವಿದ್ಯಾರ್ಥಿಗಳು ಇತರರು ಇದ್ದರು.


Share It

You cannot copy content of this page