ಸುದ್ದಿ

ಹಿಪ್ಪೋ ಗೆ ಚಿಕಿತ್ಸೆ ನೀಡುವಾಗ ಮೃತಪಟ್ಟ ಡಾ. ಸಮೀಕ್ಷಾ ರೆಡ್ಡಿಗೆ ಗೌರವ: ಬನ್ನೇರುಘಟ್ಟದ ಹಿಪ್ಪೋ ಬ್ಲಾಕ್ ಗೆ ವೈದ್ಯೆಯ ಹೆಸರು ನಾಮಕರಣ

Share It

ಬೆಂಗಳೂರು: ಗರ್ಭಿಣಿ ಹಿಪ್ಪೊಗೆ ಚಿಕಿತ್ಸೆ ನೀಡುವ ವೇಳೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಧೈರ್ಯಶಾಲಿ ವನ್ಯಜೀವಿ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ವನ್ಯಜೀವಿ ಸಂರಕ್ಷಣೆಗಾಗಿ ತೋರಿದ ಸಮರ್ಪಣಾಭಾವ ಮತ್ತು ಪರಿಶ್ರಮ ಎಂದೆಂದಿಗೂ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಆಕೆಯನ್ನು ಸ್ಮರಿಸಲು ಅರಣ್ಯ ಇಲಾಖೆ ಮುಂದಾಗಿದೆ. 

ಹಿಪ್ಪೋಗೆ ಸಿಕಿತ್ಸೆ ನೀಡುವಾಗ ತುಳಿತಕ್ಕೆ ಬಲಿಯಾಗಿ ಡಾ ಸಮೀಕ್ಷಾ ಮೃತಪಟ್ಟಿದ್ದರು. ಆಕೆಯನ್ನು ಗೌರವಿಸುವ ಸಲುವಾಗಿ ಈ ಮೊದಲು ಕೇವಲ ಮರಿ ಹಿಪ್ಪೊಗೆ ಮಾತ್ರ ಡಾ. ಸಮೀಕ್ಷಾ ಅವರ ಹೆಸರಿಡಲಾಗಿತ್ತು. ಆದರೆ ಅವರ ಈ ತ್ಯಾಗ ಮತ್ತು ಸೇವೆ ಇತಿಹಾಸದಲ್ಲಿ ಸದಾ ಅಚ್ಚಳಿಯದೆ ಉಳಿಯಬೇಕು ಎಂಬ ಕಾರಣಕ್ಕೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಡೀ ಹಿಪ್ಪೊ ಬ್ಲಾಕ್‌ಗೆ ‘ಸಮೀಕ್ಷಾ ಬ್ಲಾಕ್’ ಎಂದು ನಾಮಕರಣ ಮಾಡುವಂತೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಶಿಫಾರಸು ಮಾಡಿದ್ದಾರೆ. 

ಈ ಕುರಿತು ಮಾತನಾಡಿರುವ ಅವರು, ಡಾ ಸಮೀಕ್ಷಾ ರೆಡ್ಡಿ ಅವರ ತ್ಯಾಗವನ್ನು ಸ್ಮರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಈ ಬ್ಲಾಕ್ ಲೋಕಾರ್ಪಣೆ ಸಮಾರಂಭಕ್ಕೆ ಡಾ. ಸಮೀಕ್ಷಾ ಅವರ ಪೋಷಕರನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಈ ಕಾರ್ಯಕ್ರಮದಲ್ಲಿ ನಾನೂ ಸಹ ಸ್ವತಃ ಉಪಸ್ಥಿತನಿರಲಿದ್ದೇನೆ. ಅವರ ಈ ಸ್ಮರಣೆ ಸದಾ ಹಸಿರಾಗಿರುವಂತೆ ಮಾಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ. 


Share It

You cannot copy content of this page