‘ಐ ಡೋಂಟ್ ನೋ ಕನ್ನಡ’: ರಾಜ್ಯೋತ್ಸವದಲ್ಲೂ ಕಾಡುತ್ತಿದೆ ಕನ್ನಡ ಕಲಿಯದ ವಲಸಿಗರ ಕಾಟ
ಬೆಂಗಳೂರು: ಕನ್ನಡ ಕಲಿಯುವ ನಿಟ್ಟಿನಲ್ಲಿ ಪರಭಾಷಿಕರಿಗೆ ಎಲ್ಲಿಲ್ಲದ ಅಸಡ್ಡೆ, ಆದ್ರಲ್ಲೂ ಬೆಂಗಳೂರಿನಲ್ಲಿ ಯಾವುದೇ ಭಾಷೆಯವರಾದ್ರೂಮ
ಬದುಕಬಹುದು. ಹಿಗಾಗಿ, ಕನ್ನಡ ಕಲಿಯೋದು ಯಾಕೆ ಅಸಡ್ಡೆ ಸಹಜವೇ.
ಇಂತಹದ್ದೇ ಒಂಣದು ಘಟನೆ ಇದೀಗ ರಾಜ್ಯೋತ್ಸವ ದಿನವಶೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. 12 ವರ್ಷದಿಂದ ನಗರದಲ್ಲಿ ನೆಲಸಿರುವ ವಲಸಿಗನೊಬ್ಬ ‘ಐ ಡೋಂಟ್ ನೋ ಕನ್ನಡ’ ಎನ್ನುವ ಮೂಲಕ ಕನ್ನಡಿಗರನ್ನು ಕೆಣಕಿದ್ದಾನೆ. ಹೌದು, ಅವನ್ಯಾಕೆ ಕನ್ನಡ ಕಲಿಯಬೇಕು ಅನ್ನೋ ವಾದವೂ ಜೋರಾಗಿದೆ.
ಜಾಲತಾಣದಲ್ಲಿ ಕನ್ನಡ, ಕನ್ನಡಿಗರ ಬಗ್ಗೆ ಟೀಕೆಗೆ ಸಿಎಂ ಸೂಕ್ತ ಕ್ರಮದ ಎಚ್ಚರಿಕೆ ನೀಡಿರುವ ದಿನವೇ ಇಂತಹ ಘಟನೆ ನಡೆದಿದ್ದು, ನೂರಾರು ಜನ ಕನ್ನಡ ಕಲಿಯದೇ ಅಸಡ್ಡೆಯಿಂದ ವರ್ತಿಸುವ ಚಾಳಿ ಮುಂದುವರಿಸಿದ್ದಾರೆ. ಬೆಂಗಳೂರು ನಗರ ಪೊಲೀಸರು, ಕನ್ನಡ ಕಲಿಕೆಗೆ ಮುಂದಾಗುವಂತೆ ವಲಸಿಗರಿಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಪೋಸ್ಟರ್ ಅಭಿಯಾನ ನಡೆಯುತ್ತಿದೆ.
ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಲಸಿಗರೊಬ್ಬರನ್ನು ಕನ್ನಡದ ವ್ಯಕ್ತಿ ಇಂಗ್ಲೀಷ್ ನಲ್ಲಿ ಪ್ರಶ್ನೆ ಮಾಡಿದ್ದು, 12 ವರ್ಷವಾದರೂ ಕನ್ನಡ ಕಲಿತಿಲ್ಲ, ಇದು ನಿಮ್ಮ ತಪ್ಪಲ್ಲವೇ, ಇದರಿಂದ ನಿಮಗೇ ನಷ್ಟ. ನೀವಿರೋದು ಬೆಂಗಳೂರಿನಲ್ಲಿ, ಗುಜರಾತ್, ಮುಂಬೈ ಅಲ್ಲ, ಹೀಗಾಗಿ ಕನ್ನಡ ಕಲಿಯಿರಿ, ಇದು ನನ್ನ ಮನವಿ ಎಂದು ಕೇಳಿಕೊಂಡಿದ್ದಾನೆ.
ಇದಕ್ಕೆ ವಲಸಿಗ ವ್ಯಕ್ತಿ ಅಸಡ್ಡೆಯಿಂದಲೇ ಉತ್ತರ ನೀಡಿದ್ದು, ನಿನಗೆ ಹಿಂದಿ ಬರುತ್ತಾ ಹಾಗಾದ್ರೆ ಎಂದು ಪ್ರಶ್ನೆ ಮಾಡಿದ್ದಾನೆ. ಹೌದು ಬರುತ್ತೇ ನಾನು ಎಲ್ಲ ಭಾಷೆಗೆ ಗೌರವ ಕೊಡ್ತೇನೆ ಎಂಬ ಕನ್ನಡಿಗನಿಗೆ ವೀ ಆರ್ ಇಂಡಿಯನ್ಸ್ ಎಂದು ಬುದ್ದಿ ಹೇಳಲು ಮುಂದಾಗಿದ್ದಾನೆ. ಇದಕ್ಕೆ ತಕ್ಕ ಉತ್ತರ ನೀಡಿರುವ ಕನ್ನಡದ ವ್ಯಕ್ತಿ, ಐ ವೀ ಆರ್ ಆಲ್ ಇಂಡಿಯನ್ಸ್, ಬಟ್ ಯೂ ಲರ್ನ್ ಕನ್ನಡ ಯೂ ಆರ್ ಲೀವಿಂಗ್ ಬೆಂಗಳೂರು ಎಂದು ಹೇಳಿದ್ದಾರೆ.
ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಏಕೆ ಕಲಿಯಬೇಕು. ಅಲವಲಸಿಗರಿಗೆ ಅವರದ್ದೇ ಆದ ಬೇರೆ ಕೆಲಸಗಳಿರುತ್ತವೆ. ಕನ್ನಡ ಕಲಿಯಲು ಟೈಂ ಸಿಗಲ್ಲ ಎಂಬರ್ಥದ ಮಾತುಗಳನ್ನು ಕೆಲವರು ಆಡಿದ್ದಾರೆ. ಈ ನಡುವೆ ಪ್ರಶ್ನೆ ಮಾಡಿದ ವ್ಯಕ್ತಿಯ ಬದ್ಧತೆಯನ್ನು ಕನ್ನಡ ಪರರು ಕೊಂಡಾಡಿದ್ದಾರೆ.