ಬೆಳಗಾವಿಯ ಶಾಹು ನಗರದಲ್ಲಿ ಔರಂಗಜೇಬ್ ಬ್ಯಾನರ್ ಹಾಕಿ ವಿಕೃತಿ ಮರೆದ ಕಿಡಿಗೇಡಿಗಳು
ಬೆಳಗಾವಿ: ಬೆಳಗಾವಿಯ ಶಾಹು ನಗರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಬ್ಯಾನರ್ ಅಳವಡಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸರು ಮಧ್ಯೆ ಪ್ರವೇಶ ಮಾಡಿ ಅದನ್ನು ತೆರವುಗೊಳಿಸಿದ್ದಾರೆ.
ರವಿವಾರ ರಾತ್ರಿ ಬ್ಯಾನರ್ ಅಳವಡಿಸಲಾಗಿದೆ. ಇದನ್ನು ತಕ್ಷಣ ತೆಗೆಯುವಂತೆ ನಾಗರಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಪೊಲೀಸರು ವಿಷಯ ತಿಳಿದು ಮಹಾನಗರ ಪಾಲಿಕೆ ಸಿಬ್ಬಂದಿ ಕರೆಸಿ ಬ್ಯಾನರ್ ತೆರವು ಮಾಡಿದ್ದಾರೆ.
ಆಗ ಕೆಲ ಯುವಕರು ಆಕ್ಷೇಪಿಸಿ ವೀರ ಸಾವರ್ಕರ್ ಬ್ಯಾನರ್ ಹಾಕಲಾಗಿದೆ ಅದನ್ನು ಪೊಲೀಸರು ಯಾಕೆ ತೆಗೆಯುವ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.