ರಾಜಕೀಯ ಸುದ್ದಿ

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರಿಗೆ ಕರ್ನಾಟಕ ವುಮನ್ ಅಚೀವರ್ಸ್ ಅವಾರ್ಡ್

Share It


ಬೆಂಗಳೂರು: ಕೆಪಿಸಿಸಿ ಮಹಿಳಾ ಘಟಕದ ಸಾರಥ್ಯ ವಹಿಸಿರುವ ಸೌಮ್ಯಾ ರೆಡ್ಡಿ ಅವರು ಕರ್ನಾಟಕ ವುಮೆನ್ ಅಚೀವರ್ಸ್ ಅವಾರ್ಡ್ ಗೆ ಭಾಜನರಾಗಿದ್ದಾರೆ.

ಕೆ.ಕೃಷ್ಣಯ್ಯ ಶೆಟ್ಟಿ ಜ್ಯುವೆಲರ್ಸ್ ಪ್ರಾಯೋಜಕತ್ವದಲ್ಲಿ ಕರ್ನಾಟಕ ವುಮೆನ್ಸ್ ಅಚೀವರ್ಸ್ ಅವಾರ್ಡ್ ನ ರಾಜಕೀಯ ವಿಭಾಗದಲ್ಲಿ ಸೌಮ್ಯಾ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಡಿಸೆಂಬರ್15 ರ ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮ ಬೆಂಗಳೂರಿನ ಯಶವಂತಪುರ ದ ತಾಜ್ ಹೊಟೇಲ್ ನಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.

ಜಯನಗರ ಕ್ಷೇತ್ರದ ಮಾಜಿ ಶಾಸಕಿ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸಿದ ಸೌಮ್ಯಾ ರೆಡ್ಡಿ ಅವರು, ಪ್ರಸ್ತುತ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದಾರೆ.


Share It

You cannot copy content of this page