ಹೆರಿಗೆ ನಂತರ ಅರ್ಧ ಮೀಟರ್ ಬಟ್ಟೆ ಹೊಟ್ಟೆಯಲ್ಲೇ ಬಿಟ್ಟ ವೈದ್ಯರು ಇತ್ತು: 6 ಜನರ ವಿರುದ್ಧ FIR ದಾಖಲು
ನೋಯ್ಡಾ: ಹೆರಿಗೆಯ ನಂತರ ಮಹಿಳೆಯ ಹೊಟ್ಟೆಯಲ್ಲಿ ಅರ್ಧ ಮೀಟರ್ ಬಟ್ಟೆಯನ್ನು ಉಳಿಸಿದ್ದ ವೈದ್ಯರ ನಿರ್ಲಕ್ಷ್ಯ ಸಂಬಂಧ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಿಳೆಯ ಪತ್ನಿಯ ದೂರಿನ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 2023 ರಿಂದ 15 ತಿಂಗಳ ಕಾಲ ಆಕೆಯ ಹೊಟ್ಟೆಯಲ್ಲಿ ಉಳಿದ ಬಟ್ಟೆಯಿಂದ ಆಕೆ ಅನುಭವಿಸಿದ ನೋವು ಹೇಳತೀರದು.
2023 ರಲ್ಲಿ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಗೆ ಹೆರಿಗೆ ತೆರಳಿದ್ದರು. ಸಿ ಸೆಕ್ಷನ್ ಸರ್ಜರಿ ಮೂಲಕ ಹೆರಿಗೆ ಮಾಡಿಸಿ, ಈ ವೇಳೆ ಅರ್ಧ ಮೀ.ಗೂ ಹೆಚ್ಚು ಉದ್ದದ ಬಟ್ಟೆಯನ್ನು ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಲಾಗಿತ್ತು. ಇದರಿಂದ ಆಕೆಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ.
ಪ್ರತಿ ಸಲ ನೋವು ಹೆಚ್ಚಾದಾಗಲೂ ಒಂದೊಂದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಲಾಗಿತ್ತು. ಅನೇಕ ಪರೀಕ್ಷೆಗಳನ್ನು ಮಾಡಲಾಯಿತು. ಆದರೆ, ಕಾಯಿಲೆ ಏನೆಂಬುದೇ ಕುಟುಂಬಸ್ಥರಿಗೆ ಗೊತ್ತಾಗಲಿಲ್ಲ. ಎಂಆರ್‌ಐ ಸ್ಕಾನಿಂಗ್ ಮಾಡಿದಾಗಲೂ ಬಟ್ಟೆಯ ಬಗ್ಗೆ ಮಾಹಿತಿ ಸಿಗಲಿಲ್ಲ. ಮಾರ್ಚ್ 2025 ರಲ್ಲಿ ವೈದ್ಯರ ಸಲಹೆಯ ಮೇರೆಗೆ ಮರುಶಸ್ತ್ರಚಿಕಿತ್ಸೆ ನಡೆಸಲಾಯಿತು.
ಈ ವೇಳೆ ಆಕೆಯ ಹೊಟ್ಟೆಯಲ್ಲಿ ಅರ್ಧ ಮೀಟರ್ ಗೂ ಉದ್ದದ ಬಟ್ಟೆಯಿರುವುದು ಕಂಡುಬಂದಿತ್ತು. ಈ ಎಲ್ಲ ದಾಖಲೆಗಳನ್ನು ಆಸ್ಪತ್ರೆಯ ಮುಖ್ಯಸ್ಥರಿಗೆ ನೀಡಿದ್ದ ಮಹಿಳೆಯ ಪತಿ, ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ, ವೈದ್ಯರ ಮೇಲಾಗಲೀ, ನೊಂದವರಿಗಾಗಲೀ ಯಾವುದೇ ನ್ಯಾಯ ಸಿಗಲಿಲ್ಲ.
ಹೀಗಾಗಿ, ಮಹಿಳೆಯ ಪತಿ ನೋಯ್ಡಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಿಎನ್ ಎಸ್ ಕಾಯಿದೆ 125, 125A ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥರು, ವೈದ್ಯರು ಮತ್ತು ಸಹಾಯಕಿ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.


