ಉಪಯುಕ್ತ ಸುದ್ದಿ

ಸಚಿವರ ಮನವೊಲಿಕೆಗೆ ಮಣಿದ ಸಾರಿಗೆ ನೌಕರರು: ಮಾ.2 ರ ಧರಣಿಯನ್ನು ಮುಂದೂಡಲು ತೀರ್ಮಾನ

Share It

ಬೆಂಗಳೂರು: ಸಾರಿಗೆ ನೌಕರರು ಮಾರ್ಚ್ 2 ರಂದು ನಡೆಸಲು ಉದ್ದೇಶಿಸಿದ್ದ ಧರಣಿಯನ್ಮು ಕೈಬಿಡುವುದಾಗಿ ಘೋಷಣೆ ಮಾಡಿದ್ದಾರೆ.

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರ ಮಾತುಕತೆಯ ಪರಿಣಾಮವಾಗಿ ನೌಕರರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾರ್ಚ್ 2 ರಂದು ಸರಕಾರ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದರು. ಅವರ ಭರವಸೆಗೆ ಮಣಿದ ನೌಕರರು ಧರಣಿ‌ ಕೈ ಬಿಟ್ಟಿದ್ದಾರೆ.

ವೇತನ ಹೆಚ್ಚಳ ಹಿಂಬಾಕಿ ಹಾಗೂ 2024 ರ‌ ಜನವರಿ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ನಾಲ್ಕು ನಿಗಮಗಳ ನೌಕರರು ಫೆ. 19 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟಮೆಗೆ ಮುನ್ಮವೇ ಸರಕಾರ26 ತಿಂಗಳ ವೇತನ ಹಿಂಬಾಕಿಗೆ ಆದೇಶ ನೀಡಿತ್ತು.

ಏ.1, 2025 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳದ ಕುರಿತು ಚರ್ಚಿಸಲು ತೀರ್ಮಾನಿಸಿತ್ತು. ಆಗ ಧರಣಿ ಕೈಬಿಟ್ಟ ನೌಕರರು, ಮಾರ್ಚ್ 2 ರಂದು ಮತ್ತೊಂದು ಸುತ್ತಿನ ಧರಣಿ ನಡೆಸುವ ಗಡುವು ನೀಡಿದ್ದರು.  ಇದೋಗ ಸಾರಿಗೆ ಸಚಿವರ ಭರವಸೆ ಹಿನ್ನೆಲೆಯಲ್ಲಿ ಮಾರ್ಚ್ 2 ರ ಧರಣಿ ಕೈಬಿಟ್ಟಿದ್ದಾರೆ.


Share It

You cannot copy content of this page