ಬೆಳಗಾವಿ: ಚನ್ನಮ್ಮನ ಕಿತ್ತೂರು ನೂತನ ಬಸ್ ಘಟಕದ ಉದ್ಘಾಟನೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಕಾಯಕಲ್ಪ ನೀಡಲಾಗುವುದು ಎಂದು ತಿಳಿಸಿದರು.
ಚನ್ನಮ್ಮನ ಕಿತ್ತೂರು ನೂತನ ಬಸ್ ಘಟಕವನ್ನು ರೂ5.27ಕೋಟಿ ವೆಚ್ಚದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ 15 ವಾಹನಗಳ ಬಲದೊಂದಿಗೆ 15 ವೇಗದೂತ ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಗುತ್ತಿದೆ. ಸದರಿ ಘಟಕದ ವ್ಯಾಪ್ತಿಯೊಳಗೆ 01 ಬಸ್ ನಿಲ್ದಾಣವು ಒಳಗೊಂಡಿದೆ ಎಂದರು.
ಇತ್ತೀಚೆಗಷ್ಟೇ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣವನ್ನು ರೂ.23.48 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದು (ಡಲ್ಟ್ ನ ಅನುದಾನದೊಂದಿಗೆ ) , ಬಾಗಲಕೋಟೆ ನವನಗರದ ನೂತನ ಬಸ್ ಘಟಕ ನಿರ್ಮಾಣ ರೂ. 6.56 ಕೋಟಿ ವೆಚ್ಚದಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಶಿಗ್ಗಾಂವ ಪಟ್ಟಣದಲ್ಲಿ ನೂತನ ಬಸ್ ಘಟಕ ನಿರ್ಮಾಣ ರೂ.8 ಕೋಟಿ ವೆಚ್ಚದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ ಎಂದರು.

ನೇಮಕಾತಿ: 2000 ಚಾಲನಾ ಸಿಬ್ಬಂದಿಗಳ ನೇಮಕಾತಿ ಪೂರ್ಣಗೊಳಿಸಿ, ನೇಮಕಾತಿ ಆದೇಶ ವಿತರಿಸಲಾಗಿದೆ. ಮಾರ್ಚ್ 2024 ರಿಂದ ಇಲ್ಲಿಯವರೆಗೆ ವಿವಿಧ ಹುದ್ದೆಗಳಲ್ಲಿ ಅನುಕಂಪದ ಆಧಾರದ ಮೇಲೆ 158 ಸಿಬ್ಬಂದಿಗಳ ನೇಮಕಾತಿ ನೀಡಲಾಗಿದೆ. ದರ್ಜೆ 2 ರ ಅಧಿಕಾರಿಗಳ ಒಟ್ಟು 33 ಹುದ್ದೆಗಳ ನೇರ ನೇಮಕಾತಿಯ ಮತ್ತು ದರ್ಜೆ 2ರ ಅಧಿಕಾರಿಗಳ ಹುದ್ದೆಗಳ ಆಂತರಿಕ ನೇಮಕಾತಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದರು.
ಚನ್ನಮ್ಮನ ಕಿತ್ತೂರು ಬಸ್ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಬಾಸಾಹೇಬ ಪಾಟೀಲ್, ಮಾನ್ಯ ಶಾಸಕರು, ಕಿತ್ತೂರು, ವಿನಯ ಬಾ. ನಾವಲಗಟ್ಟಿ, ಜಿಲ್ಲಾಧ್ಯಕ್ಷರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಬೆಳಗಾವಿ, ಸುನೀಲ್ ಹನಮಣ್ಣವರ, ಉಪಾಧ್ಯಕ್ಷರು, ವಾ.ಕ.ರ.ಸಾ. ಸಂಸ್ಥೆ, ಪ್ರಿಯಾಂಗಾ ಎಂ., ವ್ಯವಸ್ಥಾಪಕ ನಿರ್ದೇಶಕರು, ವಾ.ಕ.ರ.ಸಾ. ಸಂಸ್ಥೆ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

