ದೇಶದ ಅತ್ಯಂತ ಸ್ವಚ್ಛ ನಗರದಲ್ಲಿ ಕಲುಷಿತ ನೀರು ಕುಡಿದು ಮೂರು ಜನರ ಸಾವು !

Share It

ಇಂದೋರ್ (ಮಧ್ಯಪ್ರದೇಶ): ದೇಶದ ನಂಬರ್​ 1 ಸ್ವಚ್ಛ ನಗರಿ ಎಂಬ ಖ್ಯಾತಿ ಪಡೆದಿರುವ ಇಂದೋರ್​​ನಲ್ಲಿ ಕಲುಷಿತ ನೀರು ಕುಡಿದು 150 ಮಂದಿ ಅಸ್ವಸ್ಥರಾಗಿದ್ದಾರೆ. ಅದರಲ್ಲಿ ಮೂರು ಜನರು ಸಾವಿಗೀಡಾಗಿರುವ ವರದಿಯಾಗಿದೆ.

ಇಂದೋರ್‌ನ ವಿಧಾನಸಭಾ ಕ್ಷೇತ್ರದ ಭಾಗೀರಥಿಪುರದಲ್ಲಿ ಈ ಘಟನೆ ನಡೆದಿದ್ದು, ಗುರುವಾರದಿಂದ ನಲ್ಲಿಗಳಲ್ಲಿ ಕೊಳಕು ನೀರು ಬರುತ್ತಿರುವ ಬಗ್ಗೆ ಜನರು ದೂರು ನೀಡಿದ್ದರು. ಅಧಿಕಾರಿಗಳು ಎಚ್ಚೆತ್ತುಕೊಳ್ಳದ್ದರಿಂದ ಈ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

ಶನಿವಾರದಿಂದ ಜನರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು 40ಕ್ಕೂ ಹೆಚ್ಚು ಜನರು ದಾಖಲಾಗಿದ್ದಾರೆ. ಮಂಗಳವಾರ ಈ ಸಂಖ್ಯೆ ದುಪ್ಪಟ್ಟಾಗಿದೆ. ವಿಷಯ ತಿಳಿದ ಬಳಿಕ ಅಧಿಕಾರಿಗಳು ಭಾಗೀರಥಪುರಕ್ಕೆ ಆಗಮಿಸಿ ಕಲುಷಿತ ನೀರಿನಿಂದ ಅಸ್ವಸ್ಥರಾದ ಜನರನ್ನು ಪರೀಕ್ಷಿಸಿ, ನೀರಿನ ಮಾದರಿ ಸಂಗ್ರಹಿಸಿದ್ದಾರೆ.

ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾದ ಮೂವರು ವಾಂತಿ ಮತ್ತು ಅತಿಸಾರದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಲುಷಿತ ನೀರು ಮೂವರನ್ನು ಬಲಿಪಡೆದರೂ, ಆರೋಗ್ಯ ಇಲಾಖೆ ಎರಡು ಸಾವುಗಳನ್ನು ಮಾತ್ರ ದೃಢಪಡಿಸಿದೆ. 50 ರಿಂದ 60 ಸಾವಿರ ಜನಸಂಖ್ಯೆ ಹೊಂದಿರುವ ಭಾಗೀರಥಪುರ ಪ್ರದೇಶದಲ್ಲಿ ಸದ್ಯ 25 ವೈದ್ಯರ ತಂಡ ನಿಯೋಜಿಸಲಾಗಿದೆ. ಮನೆ-ಮನೆಗೆ ತೆರಳಿ ರೋಗಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.


Share It

You May Have Missed

You cannot copy content of this page