ಉಪಯುಕ್ತ

KSRTC ಈಗ ರಾಷ್ಟ್ರೀಯ ಕಾರ್ಪೋರೇಟ್ ಕಿಂಗ್: ನಾಯಕತ್ವದ ಚಾಣಕ್ಯ ಪ್ರಶಸ್ತಿ ಪಡೆದ ಸಂಸ್ಥೆ

Share It


ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (PRCI) ಆಯೋಜಿಸಿದ 18 ನೇ ವಿಶ್ಚ ಸಂವಹನ ಸಮ್ಮೇಳನ 2024ರ ವರ್ಷದ ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿ ಲಭಿಸಿದೆ.

ಕೆಎಸ್ ಆರ್ ಟಿಸಿಯ ಕಾರ್ಮಿಕ ಸ್ನೇಹಿ, ಪ್ರಯಾಣಿಕ ಸ್ನೇಹಿ ಉಪಕ್ರಮಗಳಿಗೆ ಹಾಗೂ ವಿವಿಧ ಬಸ್ಸುಗಳ ಬ್ರ್ಯಾಂಡಿಂಗ್ ಕಾರ್ಯಕ್ಕೆ ಪ್ರಶಸ್ತಿ ಲಭಿಸಿದೆ. ಕೇಂದ್ರ ಸರಕಾರದ ಇಂಧನ, ನವೀನ ಮತ್ತು ನವೀಕರಿಸಿದ ಇಂಧನ ಸಚಿವಾಲಯದ ರಾಜ್ಯ ಸಚಿವ ಮತ್ತು 2024ನೇ ವರ್ಷದ ಮಿಸ್ ಗ್ಲೋಬಲ್ ಇಂಡಿಯಾ ಸ್ವೀಸೆಲ್ ಮರಿಯಾ ಫುರ್ಥಾಡೋ, PRCI ರಾಷ್ಟ್ರೀಯ ಅಧ್ಯಕ್ಷೆ ಗೀತಾ ಶಂಕರ್ ಅವರು ಮಂಗಳೂರು ನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ KSRTCಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ಹೆಚ್.ಟಿ, ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮತ್ತು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ.ಹೊಸಪೂಜಾರಿ ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.


Share It

You cannot copy content of this page