ಶಿವ ನಾದರ್ ದಾನದ ಕತೆ ಕೇಳಿದ್ರೆ ಹೌಹಾರುತ್ತೀರಾ!
ಅಂಬಾನಿ, ಅದಾನಿ ಯಾರೂ ಮಾಡಿಲ್ಲ ಇವರಷ್ಟು ದಾನ
ಬೆಂಗಳೂರು:ದೊಡ್ಡವರು ದಾನ ಮಾಡುವುದು ಸಾಮಾನ್ಯ ಸಂಗತಿ, ಆದರೆ, ದುಡಿದದ್ದನ್ನೆಲ್ಲ ದಾನದ ಮೂಲಕ ನೀಡುವುದು ಎಲ್ಲರಿಗೂ ಬರುವುದಿಲ್ಲ. ಆದರೆ, ಇಲ್ಲೊಬ್ಬ ಉದ್ಯಮಿ ತನ್ನ ದುಡಿಮೆಯ ದಾಖಲೆ ಭಾಗವನ್ನು ದೇಶದ ಏಳಿಗೆಗೆ ಬಳಸಿದ್ದಾರೆ.
ದೇಶದ ಖ್ಯಾತ ಉದ್ಯಮಿಯಾದ ಶಿವನಾದರ್ ಅತಿಹೆಚ್ಚು ದಾನ ಮಾಡಿದ ಭಾರತೀಯ ಎನಿಸಿಕೊಂಡಿದ್ದಾರೆ. ತಮ್ಮ ಶಿವನಾದರ್ ಫೌಂಡೇಶನ್ ಮೂಲಕ ಅವರು, 2153 ಕೋಟಿ ರು.ಗಳನ್ನು ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ದಾನ ಮಾಡಿದ್ದಾರೆ.
ಏಷ್ಯಾದ ಅತಿದೊಡ್ಡ ಸಾಹುಕಾರ ಮುಖೇಶ್ ಅಂಬಾನಿ ಅವರ ದಾನ 407 ಕೋಟಿ ರು.ಗಳಾಗಿದ್ದು, ಶಿವ ನಾದರ್ ಮಾಡಿದ ದಾನದ ಐದನೇ ಒಂದು ಭಾಗದಷ್ಟು ಪ್ರಮಾಣ ಇಲ್ಲ. ಮೂರನೇ ಸ್ಥಾನದಲ್ಲಿರುವ ಬಜಾಜ್ ಕುಟುಂಬ ತಮ್ಮ ಟ್ರಸ್ಟ್ ಮೂಲಕ 352 ಕೋಟಿ ರು. ಗಳನ್ನು ಸಾಮಾಜಿಕ ಕೆಲಸಗಳಿಗೆ ಬಳಕೆ ಮಾಡಿದೆ.
ಬಿರ್ಲಾ ಕುಟುಂಬ ದಾನದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 345 ಕೋಟಿ ರು.ಗಳನ್ನು ಭಾರತದ ಶೈಕ್ಷಣಿಕ ಅಭಿವೃದ್ಧಿಯ ಉದ್ದೇಶಕ್ಕೆ ದಾನ ಮಾಡಿದ್ದಾರೆ. ಐದನೇ ಸ್ಥಾನದಲ್ಲಿ ಗೌತಮ್ ಅದಾನಿ ಅವರಿದ್ದು, 330 ಕೋಟಿ ರು. ಗಳನ್ನು ಗ್ರಾಮಾಂತರ ಭಾಗದ ಶೈಕ್ಷಣಿಕ ಬೆಳವಣಿಗೆಗೆ ದಾನ ಮಾಡಿದ್ದಾರೆ.
ನಂದನ್ ನೀಲೇಕಣಿ ಆರನೇ ಸ್ಥಾನದಲ್ಲಿದ್ದು, 307 ಕೋಡಿ ರು. ದಾನ ಮಾಡಿದ್ದಾರೆ. ಏಳನೇ ಸ್ಥಾನದಲ್ಲಿ ಕೃಷ್ಣ ಚಿವುಕುಲಾ, ಎಂಟನೇ ಸ್ಥಾನದಲ್ಲಿ ಅನಿಲ್ ಅಗರ್ವಾಲ್, ಒಂಬತ್ತನೇ ಸ್ಥಾನದಲ್ಲಿ ಸುಸ್ಮಿತಾ ಮತ್ತು ಸುಬ್ರಿತಾ ಬಗ್ಚಿ ಹಾಗೂ ಹತ್ತನೇ ಸ್ಥಾನದಲ್ಲಿ ರೋಹಿಣಿ ನೀಲೇಕಣಿ ಸ್ಥಾನ ಪಡೆದಿದ್ದಾರೆ.
ಮೂಲತಃ ತಮಿಳುನಾಡಿನವರಾದ ಶಿವ ನಾದರ್ ಅವರು, ಭಾರತದ ಬಿಲೇನಿಯರ್ ಆಗಿದ್ದಾರೆ. ಅವರು HCL ಸಂಸ್ಥಾಪಕರಾಗಿದ್ದು ನಾದರ್ ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ತಮ್ಮ ದುಡಿಮೆಯ ಬಹುಪಾಲನ್ನು ಸಮಾಜದ ಏಳಿಗೆಗೆ ಬಳಸುವ ಮೂಲಕ ಮನೆ ಮಾತಾಗಿದ್ದಾರೆ.
ಮೂಲ: Hurun India