ಅತಿವೃಷ್ಠಿಗೆ ಈ ವರ್ಷ ಬಲಿಯಾಗಿದೆ ದೇಶದ ಶೇ.60 ರಷ್ಟು ಬೆಳೆ: ಸತ್ತವರ ಸಂಖ್ಯೆ ಕೇಳಿದ್ರೆ ಬೆಚ್ಚಿಬೀಳ್ತೀರಾ?
ಬೆಂಗಳೂರು: ಪ್ರಪಂಚದಲ್ಲಿ ಹವಾಮಾನ ವೈಪರೀತ್ಯದಿಂದ ಅನೇಕ ದುರ್ಘಟನೆಗಳು ನಡೆಯುತ್ತಿದ್ದು, ಇದರ ಪರಿಣಾಮ ಭಾರತದಲ್ಲಿ ಸೃಷ್ಟಿಯಾದ ಅನಾವೃಷ್ಠಿಯಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಸಿಎಸ್ಇ ಗುರುತಿಸಿರುವ ಪ್ರಕಾರ ಮಧ್ಯಪ್ರದೇಶ ಅತಿಹೆಚ್ಚು ಅಂದರೆ, 176 ದಿನಗಳ ಕಾಲ ಹವಾಮಾನ ವೈಪರೀತ್ಯ ಅನುಭವಿಸಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ಉಂಟಾದ ದುರ್ಘಟನೆಯ ಪರಿಣಾಮ ಕೇರಳದಲ್ಲಿ ಅತಿಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಎರಡನೇ ಅತಿಹೆಚ್ಚು ದಿನಗಳ ಕಾಲದ ಹವಾಮಾನ ವೈಪರೀತ್ಯ ಪರಿಣಾಮದಿಂದ ಅತಿವೃಷ್ಠಿ ದಾಖಲಾಗಿದೆ. ಆಂದ್ರಪ್ರದೇಶದಲ್ಲಿ ಅತಿಹೆಚ್ಚು ಮನೆಗಳಿಗೆ ಅತಿವೃಷ್ಠಿಯಿಂದ ಹಾನಿಯಾಗಿದೆ. ಅಂಕಿಅಂಶಗಳ ಪ್ರಕಾರ 85,805 ಮನೆಗಳು ಹಾನಿಗೊಳಗಾಗಿವೆ ಎಂದು ಹೇಳಲಾಗಿದೆ.
ಇಷ್ಟೆಲ್ಲ ಅತಿವೃಷ್ಠಿಯ ಪರಿಣಾಮ 2024 ರ ಈವರೆಗಿನ 255 ದಿನಗಳಲ್ಲಿ ದಾಖಲಾಗಿದೆ. ಮಿಲಿಯನ್ ಗಟ್ಟಲೇ ಬೆಳೆ ನಾಶವಾಗಿದ್ದು, ಇದು ದೇಶದ ಉತ್ಪಾದನೆಯ ಶೇ.60 ರಷ್ಟಾಗಿದೆ. 3,200 ಜನರನ್ನು ಅತಿವೃಷ್ಠಿ ಬಲಿಪಡೆದಿದ್ದು, ಕೇರಳದಲ್ಲಿ ಅತಿಹೆಚ್ಚು ಅಂದರೆ, 550 ಜನರು ಪ್ರಾಣ ಕಳೆದುಕೊಂಡಿದ್ದಾರೆ.