‘ಚಾರ್ ಧಾಮ್’ ಯಾತ್ರೆಯಲ್ಲಿ ಪ್ರಾಣ ಕಳೆದುಕೊಂಡವರೆಷ್ಟು ಗೊತ್ತಾ?
ಬೆಂಗಳೂರು: ಚಾರ್ ಧಾಮ್ ಯಾತ್ರೆ ಪ್ರತಿಯೊಬ್ಬ ಭಾರತೀಯನ ಜೀವನದ ಬಹುದೊಡ್ಡ ಕನಸು. ಸಾಯುವ ಮುನ್ನ ಚಾರ್ ಧಾಮ ಯಾತ್ರೆ ಮಾಡಬೇಕು ಎಂದು ಅದೆಷ್ಟೋ ಜನರು ಬಯಸುತ್ತಾರೆ. ಈ ಯಾತ್ರೆಯ ವೇಳೆಯೇ ತಮ್ಮ ಅಂತಿಮ ಯಾತ್ರೆ ಮುಗಿದರೆ ನಾವು ಸ್ವರ್ಗಕ್ಕೆ ಹೋಗುತ್ತೇವೆ ಎಂಬ ನಂಬಿಕೆಯೂ ಜನರಲ್ಲಿದೆ.
ಈ ನಂಬಿಕೆಯ ಮೇಲೆ ಚಾರ್‌ಧಾಮ್ ಯಾತ್ರೆ ನಡೆಸಿದವರ ಪೈಕಿ ಈ ವರ್ಷದಲ್ಲಿ 246 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಯಾತ್ರೆಯ ವಿವಿಧ ಹಂತಗಳಲ್ಲಿ ಅನಾರೋಗ್ಯ ಸೇರಿ ವಿವಿಧ ಕಾರಣಗಳಿಂದ 246 ಯಾತ್ರಿಗಳು ಪ್ರಾಣಬಿಟ್ಟಿದ್ದಾರೆ ಎಂದು ಅಂಕಿ-ಅAಶಗಳು ಸ್ಪಷ್ಟಪಡಿಸಿವೆ.
ಮೇ 10ರಿಂದ ಆರಂಭವಾದ ಚಾರ್ ಧಾಮ್ ಯಾತ್ರೆ ನವೆಂಬರ್ 17ಕ್ಕೆ ಅಂತ್ಯವಾಗಲಿವೆ. ಈವರೆಗೆ 192 ದಿನಗಳ ಕಾಲ ಯಾತ್ರೆಗೆ ಅವಕಾಶ ನೀಡಿದ್ದು, ಉತ್ತರಾಖಾಂಡ್ ಸರಕಾರದ ಅಂಕಿ-ಅAಶಗಳ ಪ್ರಕಾರ 47,03,905 ಯಾತ್ರಾರ್ಥಿಗಳು ಚಾರ್‌ಧಾಮ್ ಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬದ್ರೀನಾಥ್, ಕೇದಾರ್‌ನಾಥ್, ಗಂಗೋತ್ರಿ, ಯಮನೋತ್ರಿ ಯಾತ್ರಾಸ್ಥಳಗಳು ಸಮುದ್ರಮಟ್ಟದಿಂದ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿವೆ. ಈ ಸ್ಥಳದಲ್ಲಿ ಯಾತ್ರೆ ಮಾಡುವ ಸಂದರ್ಭದಲ್ಲಿ ಕೆಲವರಿಗೆ ಆರೋಗ್ಯ ಸಮಸ್ಯೆಯುಂಟಾಗಿದೆ. ಹೀಗೆ, ಅನೇಕ ಕಾರಣಗಳಿಂದ ಇಲ್ಲಿ 246 ಜನರು ಪ್ರಾಣ ಕಳೆದುಕೊಂಡಿದ್ದಾರೆ.