ಬರೇಲಿ: ರಾಜಸ್ಥಾನದ ಅತಿದೊಡ್ಡ ಸರೋವರವಾದ ಸಂಭಾರ್ ಪ್ರದೇಶದಲ್ಲಿ ಪಕ್ಷಿಗಳ ಮಾರಣಹೋಮ ನಡೆಯುತ್ತಿದ್ದು, ಇದಕ್ಕೆ ಇರುವ ನಿಗೂಢ ಕಾರಣವನ್ನು ವಿಜ್ಞಾನಿಗಳು ಭೇದಿಸಿದ್ದಾರೆ.
ಸರೋವರದಲ್ಲಿ 3 ಲಕ್ಷಕ್ಕೂ ಅಧಿಕ ಪಕ್ಷಗಳಿದ್ದು, ಕಳೆದ ಕೆಲವು ದಿನಗಳಿಂದ ಸಾಮೂಹಿಕವಾಗಿ ಪಕ್ಷಗಳು ಸಾವನ್ನಪ್ಪುತ್ತಿವೆ. ಆದರೆ, ಸಾವಿಗೆ ನಿಖರ ಕಾರಣ ಈವರೆಗೆ ಪತ್ತೆಯಾಗಿರಲಿಲ್ಲ. ಹೀಗಾಗಿ, ಬರೇಲಿಯಲ್ಲಿರುವ ಸೆಂಟ್ರಲ್ ಏವಿಯನ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಈ ಕುರಿತು ಪ್ರಯೋಗ ನಡೆಸಲಾಗಿದ್ದು, ಇದೀಗ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.
ಏವಿಯನ್ ಬಟುಲಿಸಮ್ ಎಂಬ ಬ್ಯಾಕ್ಟೀರಿಯಾ ತಳಿಯಿಂದ ಪಕ್ಷಿಗಳು ಸಾವನ್ನಪ್ಪುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಇದೊಂದು ಆಮ್ಲಜನಕ ರಹಿತವಾಗಿ ಬ್ಯಾಕ್ಟೀರಿಯಾವಾಗಿದ್ದು, ಇದು ಉತ್ಪತಿ ಮಾಡುವ ವಿಷದಿಂದ ನರ ಮತ್ತು ಸ್ನಾಯುಗಳು ದುರ್ಬಲಗೊಂಡು ಪಕ್ಷಿಗಳು ಸಾವನ್ನಪ್ಪುತ್ತಿವೆ ಎಂಬುದು ಗೊತ್ತಾಗಿದೆ.
ತಜ್ಞರ ಪ್ರಕಾರ ಬ್ಯಾಕ್ಟೀರಿಯಾ ಮಣ್ಣಿನಲ್ಲಿ ವರ್ಷಗಳ ಕಾಲ ಜೀವಿಸುತ್ತದೆ. ಮಣ್ಣಿನಲ್ಲಿ ಸತ್ತ ಪ್ರಾಣಿಗಳ ಮೂಳೆಯನ್ನು ಸೇರಿ ಅಲ್ಲಿನ ಪ್ರೋಟಿಯಂ ಸೇವನೆ ಮಾಡಿ, ದ್ವಿಗುಣಗೊಳ್ಳುತ್ತ ಸಾಗುತ್ತದೆ. ಮಣ್ಣಿನಲ್ಲಿನ ಆಹಾರ ಮತ್ತು ಸತ್ತ ಪ್ರಾಣಿಗಳನ್ನು ತಿನ್ನುವ ಪಕ್ಷಿಗಳ ದೇಹವನ್ನು ಸೇರಿ ಮೂಳೆ ಮತ್ತು ನರಗಳನ್ನು ದುರ್ಬಲಗೊಳಿಸುತ್ತದೆ ಎನ್ನಲಾಗಿದೆ.
ನಗೌರ್, ಡುಡು ಮತ್ತು ಜೈಪುರ ಮೂರು ಜಿಲ್ಲೆಗಳಲ್ಲಿ ಈ ಸರೋವರ ವ್ಯಾಪ್ತಿಸಿದ್ದು, ನಗೌರ್ ಜಿಲ್ಲೆಯಲ್ಲಿ ಅತಿಹೆಚ್ಚು ಪಕ್ಷಿಗಳು ಪ್ರಾಣ ಬಿಟ್ಟಿವೆ. ರೋಗಪೀಡಿತ ಪಕ್ಷಿಗಳ ರಕ್ಷಣೆಗೆ ಮೂರು ಕೇಂದ್ರಗಳನ್ನು ತೆರೆಯಲಾಗಿದ್ದು, ಸೂಕ್ತ ಚಿಕಿತ್ಸೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿ ನೂರಾರು ಪ್ರಬೇಧದ ಪಕ್ಷಿಗಳಿದ್ದು, ಅವುಗಳ ರಕ್ಷಣೆಗೆ ಸರಕಾರ ಕ್ರಮವಹಿಸಿದೆ.
ನಾರ್ದನ್ ಶೋವೆಲೆರ್, ಕಾಮನರಗಳನ್ನು ಬ್ಲಾಕ್ ರೆಕ್ಕೆಡ್ ಸ್ಟಿಲ್ಟ್, ಸ್ಯಾಂಡ್ ಪೈಪರ್, ಯೂರೇಷಿಯನ್ ಕರ್ಲ್ಯೂನಂತಹ ಮಾಂಸಾಹಾರ ಪಕ್ಷಿಗಳಲ್ಲಿ ಸಮಸ್ಯೆ ಹೆಚ್ಚಾಗಿ ಲಾಣಿಸಿಕೊಳ್ಳುತ್ತಿದೆ. ಇವೆಲ್ಲವೂ ಅಪರೂಪದ ಪಕ್ಷಿಗಳಾಗಿವೆ. 2019 ರಲ್ಲಿ ಇದೇ ರೀತಿಯ ನಿಗೂಢ ಕಾಯಿಲೆಗೆ 18, ಸಾವಿರ ಪಕ್ಷಗಳು ಸಾವನ್ನಪ್ಪಿದ್ದವು. ಇದೀಗ ಸರಕಾರ ಎಚ್ಚೆತ್ತುಕೊಂಡು ಪಕ್ಷಗಳ ಸಾವಿಗೆ ತಡೆ ಹಾಕಲು ಅಗತ್ಯ ಕ್ರಮ ವಹಿಸಿದೆ.