ರುದ್ರಣ್ಣ ಆತ್ಮಹತ್ಯೆ ಪ್ರಕರಣ ತಹಸೀಲ್ದಾರ್ ಕಚೇರಿಯ ಎಲ್ಲ ಸಿಬ್ಬಂದಿ ವಿಚಾರಣೆ

police-karnataka1-13-1473744162
Share It

ಬೆಳಗಾವಿ : ಬೆಳಗಾವಿ ತಹಶಿಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿ ಖಡೇಬಜಾರ್ ಪೊಲೀಸರು “ತಹಸೀಲ್ದಾರ್ ಆಫೀಸ್ ವಾಟ್ಸ್ ಆಪ್ ” ಗ್ರೂಪ್ ನ ಎಲ್ಲರನ್ನೂ ವಿಚಾರಿಸಲಿದ್ದಾರೆ.

ಶುಕ್ರವಾರದಿಂದ ಸಿಬ್ಬಂದಿಯ ವಿಚಾರಣೆ ಪ್ರಾರಂಭಗೊಂಡಿದ್ದು ಶನಿವಾರದವರೆಗೆ 25 ಜನ ಸರಕಾರಿ ಅಧಿಕಾರಿಗಳನ್ನು ವಿಚಾರಣೆ ನಡೆಯಲಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ರುದ್ರೇಶ್ ಯಡವಣ್ಣವರ ಮೊಬೈಲ್ ಶುಕ್ರವಾರ ಸಿಕ್ಕಿದ್ದು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಹಾಗೂ ತಹಶಿಲ್ದಾರ ಕಚೇರಿಯ ಒಟ್ಟು ಆರು ಜನ ಸಿಬ್ಬಂದಿ ವಿಚಾರಣೆ ನಡೆಸಿರುವ ಖಡೇಬಜಾರ್ ಪೊಲೀಸರು ಇಂದು ಸಹ ವಿವಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ತಹಸೀಲ್ದಾರ್ ಬಸವರಾಜ ನಾಗರಾಳ ಅವರು ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿರೆಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಳಗಾವಿ “ತಹಸೀಲ್ದಾರ್ ಆಫೀಸ್ ಆಲ್ ಸ್ಟಾಪ್ ಗ್ರೂಪ್” ನಲ್ಲಿರುವ ಸಿಬ್ಬಂದಿಯನ್ನು ಕರೆದು ವಿಚಾರಣೆ ನಡೆಸಿದ್ದಾರೆ‌. ಇದೇ ಗ್ರೂಪ್ ನಲ್ಲಿ ಕೊನೆಯದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೆಸೇಜ್ ಮಾಡಿದ್ದ ರುದ್ರೇಶ್ ನ. 4 ರ ಸಂಜೆ 7.31ಕ್ಕೆ ಮೆಸೇಜ್ ಮಾಡಿದ್ದರು. ಈ ವೇಳೆ ಗ್ರೂಪ್ ನಲ್ಲಿ 106ಜನ ಸಿಬ್ಬಂದಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ.

ಇದೇ ಕಾರಣಕ್ಕೆ ಪ್ರತಿಯೊಬ್ಬ ಸಿಬ್ಬಂದಿಯನ್ನ ವಿಚಾರಣೆಗೆ ಕರೆಯುತ್ತಿರುವ ಪೊಲೀಸರು. ಇಂದು ಒಬ್ಬೊಬ್ಬರಾಗಿ ಕರೆದು ವಿಚಾರಣೆ ನಡೆಸುತ್ತಿದ್ದಾರೆ‌.

ಈ ಮಧ್ಯೆ ರುದ್ರಣ್ಣ ಸಾವಿಗೆ ಕಾರಣವೇನ್ನಲಾದ ಮೂವರೂ ಇವರೆಗೂ ನಾಪತ್ತೆಯಾಗಿದ್ದು ಅವರು ನ್ಯಾಯವಾದಿಗಳ ಮೂಲಕ ಶುಕ್ರವಾರ ಹಾಕಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನ.12ಕ್ಕೆ ಬರಲಿದೆ.


Share It

You cannot copy content of this page