2024 ರಲ್ಲಿ ಪ್ರಪಂಚದ ಶ್ರೀಮಂತ ದೇವರು ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?
ತಿರುಪತಿ: ಪ್ರಪಂಚದ ಅತ್ಯಂತ ಶ್ರೀಮಂತ ದೇವರು ಎಂಬ ದಾಖಲೆ ಹೊಂದಿರುವ ತಿರುಪತಿ ತಿರುಮಲ ದೇವಸ್ಥಾನದ ಹುಂಡಿಯಲ್ಲಿ 2024 ರಲ್ಲಿ ಈವರೆಗೆ 1,365 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ.
2.55 ಕೋಟಿ ಭಕ್ತಾಧಿಗಳು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದು, ಶ್ರೀವಾರಿ ಹುಂಡಿಯಲ್ಲಿ1,365 ಕೋಟಿ ಕಾಣಿಕೆ ಹಾಕಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನದಲ್ಲಿ ಒಂದಾದ ತಿರುಪತಿಯಲ್ಲಿ 2024-25 ನೇ ಸಾಲಿನಲ್ಲಿ1,600 ಕೋಟಿ ಕಾಣಿಕೆ ಸಂಗ್ರಹದ ಗುರಿಯನ್ನು ಟಿಟಿಡಿ ಹೊಂದಿತ್ತು.
ಈಗ 1,365 ಕೋಟಿ ರು.ಕಾಣಿಕೆ ಸಂಗ್ರಹವಾಗಿದ್ದು, ಮಾರ್ಚ್ ವೇಳೆಗೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ1600 ಕೋಟಿ ಸಂಗ್ರಹವಾಗುವ ಗುರಿಯಿದ್ದು, ನಿರೀಕ್ಷಿತ ಪ್ರಮಾಣದ ಕಾಣಿಕೆ ಸಂಗ್ರಹದಲ್ಲಿ ಕೊರತೆಯಾಗುವ ಸಾಧ್ಯತೆಯಿದೆ.
2024 ರ ಮೇ ತಿಂಗಳ ಬೇಸಿಗೆಯಲ್ಲಿ ತಿರುಪತಿಗೆ ದಾಖಲೆಯ 23 ಲಕ್ಷ ಭಕ್ತಾಧಿಗಳು ಆಗಮಿಸಿದ್ದು, ಆಗಸ್ಟ್ ತಿಂಗಳಲ್ಲಿ ಹುಂಡಿಯಲ್ಲಿ ಅತಿಹೆಚ್ಚು ಅಂದರೆ, 125.62 ಕೋಟಿ ರು. ಸಂಗ್ರಹವಾಗಿದೆ.