ಯಾದಗಿರಿ: ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿ ಸಾವನ್ನಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರು ಬಳಿ ನಡೆದಿದೆ.
ಬಸವಸಾಗರ ಜಲಾಶಯದ ಜೆಬಿಸಿ ಕಾಲುವೆಯಲ್ಲಿ ಈಜಲು ಹೋಗಿ ದುರಂತ ಸಂಭವಿಸಿದೆ. ವಿಜಯಪುರ ಮೂಲದ ಜಟ್ಟೆಪ್ಪ (19), ಕುರಿಯಪ್ಪ (19) ಮೃತರು.
ಈಜು ಬರದೆ ಇದ್ದರೂ ಪ್ರಧಾನಿ ಎಂಬಾತನ್ನು ರಕ್ಷಿಸಲು ಹೋದ ಕರಿಯಪ್ಪ ಕೂಡ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ.
ಇಬ್ಬರು ಯುವಕರು ಮೃತದೇಹ ಸತತ ಕಾರ್ಯಾಚರಣೆ ನಡೆಸಿದ ನಂತರ ದೊರೆತಿದ್ದು, ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.