ಉಪಯುಕ್ತ ರಾಜಕೀಯ ಸುದ್ದಿ

ವಿಶ್ವದಾಖಲೆ ನಿರ್ಮಿಸಲಿದೆ ರಾಜ್ಯ ಸರಕಾರದ “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ”

Share It


40 ಲಕ್ಷ ಜನರಿಂದ ಮಾನವ ಸರಪಳಿ:
ಬೀದರ್ ನಿಂದ ಚಾಮರಾಜನಗರವರೆಗೆ ಜನಜಾಗೃತಿ
ಬೆಂಗಳೂರು : ಪ್ರಜಾಪ್ರಭುತ್ವ ದಿನದಂದು ಇಡೀ ವಿಶ್ವವೇ ಬೆರಗಾಗುವ ವೊದ್ಯಮಾನವೊಂದು ರಾಜ್ಯದಲ್ಲಿ ಜರಿಗಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಮಾನವ ಸರಪಳಿ ಕಾರ್ಯಕ್ರಮ ವಿಶ್ವದಾಖಲೆ ಬರೆಯಲಿದೆ.

ಸೆ. 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯದಲ್ಲಿ ವಿನೂತನ ಕಾರ್ಯಕ್ರಮಕ್ಕೆ ಸರಕಾರ ತೀರ್ಮಾನಿಸಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ನೇತ್ರತ್ವದಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧಗೊಂಡಿದ್ದು, ವಿಶ್ವದಾಖಲೆ ಬರೆಯಲು ಸಜ್ಜಾಗಿದೆ.

ಕರ್ನಾಟಕದ ತುತ್ತತುದಿ ಬೀದರ್ ನಿಂದ ಗಡಿ ಜಿಲ್ಲೆ ಚಾಮರಾಜನಗರ ದವರೆಗೆ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಎಂಬ ಧ್ಯೇಯದೊಂದಿಗೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ‌. ಇದರಲ್ಲಿ ಶಾಲಾ ಕಾಲೇಜುಗಳ ಮಕ್ಕಳು, ಶಿಕ್ಷಕರು, ಸ್ವಸಹಾಯ ಸಂಘಗಳ ಸದಸ್ಯರು, ಸ್ವಯಂ ಸೇವಕರು ಸಂವಿಧಾನ ಪ್ರೇಮಿಗಳು ಸೇರಿ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ.

2500 ಕಿ.ಮೀ. ದೂರ ಕ್ರಮಿಸುವ ಸುಮಾರು 40 ಲಕ್ಷ ಜನರು ಮಾನವ ಸರಪಳಿ ನಿರ್ಮಿಸಲಿದ್ದು, ಕಾರ್ಯಕ್ರಮದ ನಿರ್ವಹಣೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಜತೆಗೆ ಸ್ವಯಂ ಸೇವಕರನ್ನು ನೇಮಿಸಲಾಗಿದೆ.

ವಿಶ್ವದಾಖಲೆ ಬರೆಯಲಿದೆ ಮಾನವ ಸರಪಳಿ: ಪ್ರಜಾಪ್ರಭುತ್ವ ದ ಉಳಿವಿಗೆ ನಡೆಸುತ್ತಿರುವ ಈ ಮಾನವ ಸರಪಳಿ ವಿಶ್ವದಾಖಲೆ ಬರೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂಪರ್ಕ ಮಾಡಲಿದೆ. ಇಡೀ ರಾಜ್ಯದಲ್ಲಿ ಭಾಗವಹಿಸಿವ 40 ಳ್ಷ ಜನರ ಕೈಗಳು ಒಂದನ್ನೊಂದು ಜೋಡಿಸಿಕೊಂಡಿರುವುದು ಇತಿಹಾಸದ ಪುಟ ಸೇರಲಿದೆ. ಇದು ವಿಶ್ವದಾಖಲೆಯಾಗಲಿದೆ.

ಸಿಎಂ ಸಿದ್ದರಾಮಯ್ಯ ಉದ್ಘಾಟನೆ: ಪ್ರಜಾಪ್ರಭುತ್ವ ಮಾನವ ಸರಪಳಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು,ಸರಕಾರದ ಎಲ್ಲ ಸಚಿವರು, ಆಯಾ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ,  ಶಿಕ್ಷಣ ಇಲಾಖೆಯ ಸಿಬ್ಬಂದಿ ಭಾಗವಹಿಸಲಿದ್ದಾರೆ.

10 ಲಕ್ಷ ಸಸಿ ನೆಡುವ ಕಾರ್ಯಕ್ರಮ: ಬೀದರ್- ಚಾಮರಾಜನಗರ ನಡುವಿನ ಮಾನವ ಸರಪಳಿ ನೊರ್ಮಿಸುವ ಜತೆಗೆ ಹತ್ತು ಲಕ್ಷ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ನಡೆದ ಅಭಿಯಾನದ ನೆನಪಿಗೆ ಸಸಿ ನೆಟ್ಟು ಪೋಷಿಸಲಾಗುತ್ತದೆ.


Share It

You cannot copy content of this page