ಅಪರಾಧ ರಾಜಕೀಯ ಸುದ್ದಿ

ಶರಣಾಗಿದ್ದ ನಕ್ಸಲರು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

Share It

ಬೆಂಗಳೂರು: ನೆನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದ ನಕ್ಸಲರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪೊಲೀಸರು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

ಇಂದು ಪೊಲೀಸರು ಆರು ಜನ ನಕ್ಸಲರನ್ನು ನ್ಯಾಯಾಲಯದ ಮುಂದೆ ಹಾಜರು ಮಾಡಿದ್ದರು. ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ನಕ್ಸಲ್ ನಿಗ್ರಹ ಯೋಜನೆಯಡಿ ಅವರನ್ನು ಶರಣಾಗುವಂತೆ ಸೂಚನೆ ನೀಡಲಾಗಿತ್ತು. ಸರಕಾರದ ಮುಂದೆ ಕೆಲವು ಬೇಡಿಕೆಯನ್ನಿಟ್ಟಿದ್ದ ನಕ್ಸಲರು ಶರಣಾಗಿದ್ದರು. ಸರಕಾರ ಅವರ ಕೆಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿತ್ತು.

ಈಗಾಗಲೇ ಶರಣಾಗಿರುವ ನಕ್ಸಲರು ಸೇರಿದಂತೆ ಎಲ್ಲರ ಪ್ರಕರಣಗಳನ್ನು ಶೀಘ್ರದಲ್ಲೇ ಇತ್ಯರ್ಥಪಡಿಸುವುದು ಮತ್ತು ಪ್ಯಾಕೇಜ್ ಘೋಷಣೆ ಮಾಡುವ ಭರವಸೆಯನ್ನು ಸರಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಆರು ನಕ್ಸಲರು ಸರಕಾರದ ಮುಂದೆ ಶರಣಾಗಿದ್ದಾರೆ.


Share It

You cannot copy content of this page