ಸುದ್ದಿ

ಹಿರಿಯ ಪತ್ರಕರ್ತ ರವಿರಾಜ ಗಲಗಲಿಯವರಿಗೆ KUWJ ಪ್ರಶಸ್ತಿ

Share It

ಬೆಳಗಾವಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂ ಜೆ) ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಬಾಗಲಕೋಟೆ ವಿಜಯ ಕರ್ನಾಟಕದಲ್ಲಿ ಕಳೆದ 24 ವರ್ಷಗಳಿಂದ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ಮೂಲದ ರವಿರಾಜ ಗಲಗಲಿ ಮಾನವೀಯ ವರದಿಗೆ ನೀಡುವ ಭೈರ ಹನುಮಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾನವೀಯ ಹಾಗೂ ಸಾಮಾಜಿಕ ಕಳಕಳಿಯ ವರದಿ ಮೂಲಕ ರವಿರಾಜ ಗಲಗಲಿ ಅವರು ನಾಡಿದಲ್ಲೆಡೆ ಚಿರಪರಿಚಿತರಾಗಿದ್ದಾರೆ. ಅವರ ಸೇವೆಯನ್ನು ಗಮನಿಸಿದ ಕರ್ನಾಟಕ ಪತ್ರಕರ್ತರ ಸಂಘ ಇದೀಗ ಪ್ರಶಸ್ತಿ ಘೋಷಣೆ ಮಾಡಿದೆ.

ಬಿಕಾಂ ಅಭ್ಯಸಿಸುವಾಗಲೇ ನಾಡೋಜ ದಿನಪತ್ರಿಕೆಗೆ ಅಥಣಿಯ ಬಿಡಿ ವರದಿಗಾರನಾಗಿದ್ದ ಅವರು, ನಂತರ ವಿಜಯ ಕರ್ನಾಟಕಕ್ಕೆ ಸೇರ್ಪಡೆಯಾಗಿ ಕಳೆದ 24 ವರ್ಷಗಳಿಂದ ವಿಜಯ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


Share It

You cannot copy content of this page