ಉಪಯುಕ್ತ ಸುದ್ದಿ

ಹುಬ್ಬಳ್ಳಿ-ಧಾರವಾಡ ಮಂದಿಗೆ ಗುಡ್ ನ್ಯೂಸ್: ಹುಬ್ಬಳ್ಳಿ ಬೈಪಾಸ್ ರಸ್ತೆ ಟೋಲ್ ಮುಕ್ತ

Share It

ಬೆಂಗಳೂರು: ಹುಬ್ಬಳ್ಳಿ ಬೈಪಾಸ್ ಇನ್ಮುಂದೆ ಟೋಲ್ ಮುಕ್ತವಾಗಿದ್ದು, ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಜನರಿಗೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಹುಬ್ಬಳ್ಳಿ- ಧಾರವಾಡ ನಡುವಿನ ಸಂಚಾರಕ್ಕೆ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. ಇದೀಗ ರಸ್ತೆಯ ನಿರ್ವಹಣೆ ಗುತ್ತಿಗೆ ಪಡೆದಿದ್ದ, ನಂದಿ ಹೈವೇ ಡೆವೆಲೆಪರ್ಸ್ ಲಿಮಿಟೆಡ್ ಅವರ ಕಾಲಾವಧಿ ಮುಗಿದು ಹೋಗಿದ್ದು, ನಾಳೆಯಿಂದ ರಸ್ತೆ ಟೋಲ್ ಮುಕ್ತವಾಗಲಿದೆ.

24 ವರ್ಷಗಳಲ್ಲಿ ಈ ಟೋಲ್ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಇಲ್ಲಿನವರೆಗೆ ನಂದಿ ಹೈವೇ ಡೆಬಲೆಪರ್ಸ್ ಸಂಸ್ಥೆ ಟೋಲ್ ಸಂಗ್ರಹ ಮಾಡುತಿತ್ತು. ಎರಡು ಅವಧಿಗೆ ಸಂಸ್ಥೆ ಟೋಲ್ ಸಂಗ್ರಹ ಅವಧಿಯನ್ನು ವಿಸ್ತರಣೆ ಮಾಡಿಕೊಂಡಿತ್ತು.

ಇದೀಗ ಟೋಲ್ ರಸ್ತೆಯನ್ನು ಭಾರತೀಯ ಹೆದ್ದಾರಿ ಪ್ರಾಧಿಕಾರದ ಅಧೀನಕ್ಕೆ ನೀಡಲಾಗುತ್ತಿದೆ. ದ್ವಿಪಥ ರಸ್ತೆಯನ್ನು ಈಗ ಆರು ಲೇನ್ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ಮುಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ರಸ್ತೆ ನಿರ್ವಹಣೆ ಮಾಡಲಿದೆ. ಹೀಗಾಗಿ, ಟೋಲ್ ಸಂಗ್ರಹವನ್ನು ನಿಲ್ಲಿಸಲಾಗುತ್ತಿದೆ.


Share It

You cannot copy content of this page