ಭಾರತದ ಶತ್ರು ದೇಶವಾಗಿರುವ ಪಾಕಿಸ್ತಾನ ಆರ್ಥಿಕ ದಿವಾಳಿಯಾಗಿರುವುದು ಹೊಸತೇನಲ್ಲ. ಆದ್ರೆ ಪಾಕಿಸ್ತಾನದ ಕಡಲ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸಂಪತ್ತು ಪತ್ತೆಯಾಗಿರುವುದು ಪಾಕಿಸ್ತಾನಕ್ಕೆ ಹಿಗ್ಗನ್ನು ಮೂಡಿಸಿದೆ.
ಭೂ ವಿಜ್ಞಾನದ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿವೆ. ಇಲ್ಲಿ ತೈಲವನ್ನು ಹೊರ ತೆಗೆಯುವುದು ಅಷ್ಟು ಸುಲಭವಲ್ಲ. ಬಹಳ ವರ್ಷಗಳ ಕಾಲ ಕಾಮಗಾರಿ ನಡೆಯಬೇಕಿದೆ ಎಂದು ಅಧ್ಯಯನ ತಂಡ ತಿಳಿಸಿದೆ. ಇಲ್ಲಿ ಬೃಹತ್ ಮಟ್ಟದ ನೈಸರ್ಗಿಕ ಸಂಪತ್ತು ಇದ್ದು ಇದು ಪಾಕಿಸ್ತಾನದ ಹಣೆಬರಹವನ್ನು ಬದಲಿಸಬಲ್ಲದು ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಇಲ್ಲಿಂದ ಇಂಧನವನ್ನು ಹೊರಗೆ ತೆಗೆಯಲು ಪಾಕ್ ಸರ್ಕಾರ ಸುಮಾರು 5 ಬಿಲಿಯನ್ ಡಾಲರ್ ಅಷ್ಟು ಖರ್ಚು ಮಾಡಬೇಕಿದೆ. ಕನಿಷ್ಠ 5 ವರ್ಷಗಳ ಸಮಯವನ್ನು ಖನಿಜವನ್ನು ಹೊರ ತೆಗೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧನ ತಂಡ ಹೇಳಿದೆ.

