ಜಗತ್ತನ್ನು ಆಳಿದ ದೈತ್ಯ ಎಂದೇ ಕರೆಸಿಕೊಳ್ಳುವ ಡೈನೋಸಾರ್ ಗಳು 66 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದವು. ಹವಾಮಾನ ವೈಪರೀತ್ಯದಿಂದಾಗಿ ಅವು ಸಾವನ್ನಪ್ಪಿದವು . ಆದರೆ ಈ ಭೂಮಿಯ ಮೇಲೆ ಬಿಲಿಯ ವರ್ಷಗಳಿಂದ ವಾಸವಿರುವ ಅದೆಷ್ಟೋ ಸಂತತಿಗಳು ಹಿಂದಿಗೂ ಜೀವಂತವಾಗಿವೆ. ಆ ಅಪರೂಪದ ಪ್ರಾಣಿಗಳು ಯಾವುವು ಎಂಬುದನ್ನು ಈ ಸ್ಟೋರಿ ಯಲ್ಲಿ ನೋಡುತ್ತ ಹೋಗೋಣ.
ಪ್ರಪಂಚದಲ್ಲಿ ಮಾನವ ಹುಟ್ಟುವುದಕಿಂತ ಮೊದಲೇ ಕೋಟ್ಯಂತರ ಜೀವಿಗಳು ಹುಟ್ಟಿದ್ದವು. ಅವುಗಳು ಭೂಮಿಯಲ್ಲಿ ಬದಲಾದ ವಾತಾವರಣ ಮತ್ತು ಇತರ ಸಮಸ್ಯೆಗಳನ್ನು ಭೇದಿಸಿಕೊಂಡು ಒಂದಷ್ಟು ಜೀವಿಗಳು ಉಳಿದುಕೊಂಡವು.
ಮೊಸಳೆಗಳು
ಮೊಸಳೆಗಳು ಎಲ್ಲ ಖಂಡಗಳಲ್ಲಿಯೂ ಕಂಡು ಬರುತ್ತವೆ. ಇವು ಇವು ಡೈನೋಸಾರ್ ನ ಸಮೀಪದ ಜಾತಿ ಎಂದು ಹೇಳಲಾಗುತ್ತದೆ. ಇವುಗಳು ಆರ್ಕೋಸಾರ್ ಕುಟುಂಬಕ್ಕೆ ಸೇರಿವೆ. ಸುಮಾರು 243 ಮತ್ತು 233.23 ದ. ಲಕ್ಷ ವರ್ಷಗಳ ಹಿಂದೆ ಮೊಸಳೆ ಗಳು ಭೂಮಿಯಲ್ಲಿ ಹುಟ್ಟಿದವು. ಅದರಲ್ಲೂ ಆರಂಭಿಕವಾಗಿ ಮೊಸಳೆಗಳು ಸುಮಾರು 95 ಮಿಲಿಯನ್ ವರ್ಷಗಳ ಹಿಂದೆ ಇದ್ದವು ಎಂದು ಸಂಶೋಧಕರು ಹೇಳುತ್ತಾರೆ.
ಕ್ಯಾಸೋವರಿ
ಇದೊಂದು ಪಕ್ಷಿಯಾಗಿದೆ. ಇವುಗಳು ಡೈನೋಸಾರ್ ನ ವೆಲೋಸಿರಾಪ್ಟರ್ ಗೆ ಹೋಲಿಕೆಯಾಗುತ್ತವೆ. ಈ ಪಕ್ಷಿಗಳು ಪ್ರಪಂಚದಲ್ಲೇ ಮೂರನೇ ದೊಡ್ಡ ಹಕ್ಕಿಯಾಗಿ ಗುರುತಿಸಿಕೊಂಡಿದೆ. ಮನುಷ್ಯನನ್ನು ಹೆಚ್ಚು ಆಕ್ರಮಣ ಮಾಡುವ ಈ ಪಕ್ಷಿಗಳು ತನ್ನ ತಲೆಯ ಮೇಲೆ ಚರ್ಮದ ಕ್ರೆಸ್ಟ್ ಹೊಂದಿರುತ್ತದೆ. ಇದು ಅವುಗಳನ್ನು ಹೆಚ್ಚು ಶಾಖದಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.
ಟುವಾಟಾರಾ
ನ್ಯೂಜಿಲ್ಯಾಂಡ್ ಅಲ್ಲಿ ಕಂಡು ಬರುವ ಇವುಗಳು 225 ಬಿಲಿಯನ್ ವರ್ಷಗಳ ಹಳೆಯ ಜೀವಿಗಲಾಗಿವೆ. ಇವುಗಳನ್ನು ಜೀವಂತ ಪಳೆಯುಳಿಕೆಗಳು ಎಂದು ಕರೆಯಲಾಗುತ್ತದೆ. ಇವುಗಳು ಟ್ರಯಾಸಿಕ್ ಕಾಲದ ಕೊನೆಯ ತಲೆಮಾರು ಆಗಿದ್ದವು. ಸುಮಾರು 100 ವರ್ಷಗಳ ಕಾಲ ಬದುಕ ಸಾಮರ್ಥ್ಯವನ್ನು ಇವುಗಳು ಹೊಂದಿದ್ದವು ಎಂಬುದು ಗಮನಾರ್ಹ.
ಶಾರ್ಕ್
ಇವುಗಳು ಸುಮಾರು 400 ಮಿಲಿಯನ್ ವರ್ಷಗಳ ಹಿಂದೆಯೇ ಜನ್ಮ ತಾಳಿದ್ದವು. ಇವುಗಳು 3000 ಜಾತಿಗಳನ್ನು ಒಳಗೊಂಡಿದೆ ಎಂದು ಇವುಗಳ ಪಳೆಯುಳಿಕೆಗಳು ಸೂಚಿಸುತ್ತವೆ. ಇವುಗಳು ಡೈನೋಸಾರ್ ಗಳಿಗಿಂತಲೂ ತುಂಬ ಹಳೆಯವು ಎಂಬುದು ತಿಳಿದು ಬಂದಿದೆ.
ಹಲ್ಲಿಗಳು ಮತ್ತು ಏಡಿ
ಇವು ಸುಮಾರು 240 ಮಿಲಿಯನ್ ವರ್ಷಗಳ ನಡುವೆ ಬದುಕ್ಕಿದ್ದವು. ಆರ್ಕೋಸೌರ್ಗಳ ಕುಟುಂಬದ ದೂರದ ಸಂಬಂಧಿ ಇವುಗಳಾಗಿವೆ. ಏಡಿಗಳು ಜುರಾಸಿಕ್ ಅವಧಿಯಲ್ಲಿ ಮೊದಲಿಗೆ ಭೂಮಿಯ ಮೇಲೆ ಕಾಣಿಸಿಕೊಂಡವು. ಅಮೆರಿಕದ ಹಾರ್ಸ್ಶೂ ಏಡಿ ಸುಮಾರು 450 ಮಿಲಿಯನ್ ವರ್ಷಗಳ ಹಿಂದೆಯೇ ಕಾಣಿಸಿಕೊಂಡಿತು. ಇವುಗಳು ಮೂರು ಬಗೆಯ ಆವಾಸ ಸ್ಥಾನದಲ್ಲಿ ವಾಸಿಸುವ ಪ್ರಾಣಿಗಳಾಗಿವೆ.

