ಅಪರಾಧ ಸುದ್ದಿ

ದಾವಣಗೆರೆ: ಪಾದಚಾರಿಗಳ ಮೇಲೆ ಹರಿದ ಪಿಕಪ್ ವಾಹನ, ಓರ್ವ ಸಾವು

Share It

ದಾವಣಗೆರೆ: ಪಿಕಪ್​ ವಾಹನವೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಓರ್ವ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಬಳಿ ನಡೆದಿದೆ.‌

ನವೀನ್(27) ಅಪಘಾತದಲ್ಲಿ ಮೃತಪಟ್ಟಿರುವ ಯುವಕ. ಮತ್ತೋರ್ವ ಪಾದಚಾರಿ ಹರೀಶ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಟೊಮೆಟೊ ಲೋಡ್ ಮಾಡಿಕೊಂಡು ಹೊಸಪೇಟೆ ಕಡೆಗೆ ಪಿಕಪ್ ವಾಹನ ತೆರಳುತಿತ್ತು. ಈ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದು, ಪಿಕಪ್ ವಾಹನ ನಿಯಂತ್ರಣ ಕಳೆದುಕೊಂಡ ಪರಿಣಾಮ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.‌ ಮೊದಲು ಪಾದಚಾರಿಗೆ ಡಿಕ್ಕಿ ಹೊಡೆದು ಬಳಿಕ ರಭಸವಾಗಿ ಮನೆಗೆ ನುಗ್ಗಿದೆ. ಅದೃಷ್ಟವಶಾತ್​ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ‌

ಪಿಕಪ್ ವಾಹನ ಚಾಲಕ ಪೊಲೀಸರ ವಶಕ್ಕೆ ಪಡೆದಿದ್ದು, ಇದರ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಚನ್ನಗಿರಿ ಪಿಐ ರವೀಶ್ ಅವರು ಭೇಟಿ ನೀಡಿ ಪರಿಶೀಲನೆ‌ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.


Share It

You cannot copy content of this page