ಸುದ್ದಿ

18 ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ‌ಮಾಡಿದ ಲೋಕಾಯುಕ್ತ

Share It

ಮೈಸೂರು: . ಪ್ರಭಾವಿ ವ್ಯಕ್ತಿಗಳಿಗೆ 2017 ರಲ್ಲಿ 350 ನಿವೇಶನ ಹಂಚಿಕೆ ಆರೋಪದ ಮೇಲೆ ಲೋಕಾಯುಕ್ತ 18 ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ 2017ರಲ್ಲಿ ಅಂದಿನ ಮುಡಾ ಸೂಪರಿಂಟೆಂಡಿಂಗ್ ಎಂಜಿನಿಯರ್, ಕಾರ್ಯದರ್ಶಿ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮೂರು ದಿನಗಳೊಳಗೆ ಮೈಸೂರು ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮೈಸೂರಿನ ವಿಜಯನಗರ ಎರಡನೇ ಹಂತದ ಸರ್ವೆ ನಂಬರ್ 89ಕ್ಕೆ ಅತಿಕ್ರಮ ಪ್ರವೇಶ ಮಾಡಿ 7.18 ಎಕರೆ ಒತ್ತುವರಿ ಮಾಡಿ 25 x 25 ಅಡಿ ಅಳತೆಯ ನಿವೇಶನಗಳನ್ನು ಅನುಮತಿಯಿಲ್ಲದೆ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಹಿನಕಲ್ ಪಂಚಾಯಿತಿ ಅಧ್ಯಕ್ಷ ಕೃಷ್ಣಮಾದೇಗೌಡ, ಕಾರ್ಯದರ್ಶಿ ಹಾಗೂ ಇತರರು ಆರ್‌ಟಿಐ ಕಾರ್ಯಕರ್ತ ಗಂಗರಾಜು ದೂರು ದಾಖಲಿಸಿದ್ದರು.

ಅಲ್ಲದೆ ಬಿಇಎಂಎಲ್ ನೌಕರರು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಂಚೆ ಕಚೇರಿ ಹಾಗೂ ಸರಕಾರಿ ಪತ್ರಿಕಾ ನೌಕರರು, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ದೂರಿದ್ದಾರೆ.


Share It

You cannot copy content of this page