PSI ಪರೀಕ್ಷೆ ಮುಂದೂಡಿಕೆ: ಸೆ.28ಕ್ಕೆ ಪರೀಕ್ಷೆ ನಡೆಸಲು ತೀರ್ಮಾನ
ಬೆಂಗಳೂರು: ಸೆ.22ರಂದು ನಡೆಸಲಾಗುವುದು ಎಂದು ಘೋಷಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KIA) 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ನೇಮಕಾತಿ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದುಡಲಾಗಿದೆ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಂದು ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆ ಇರುವುದರಿಂದ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು, ಬಿಜೆಪಿ ನಾಯಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಮನವಿಯಂತೆ ಸೆ.28ಕ್ಕೆ PSI ನೇಮಕಾತಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.
ಪಿಎಸ್ಐ ನೇಮಕಾತಿಗೆ ಕ್ರಮ ತೆಗೆದುಕೊಂಡಿದ್ದೇವೆ. ಮೊದಲ ಹಂತದ 545 ಜನ ಪಿಎಸ್ಐ ಹಗರಣ ಆಗಿತ್ತು. ಅದಕ್ಕೆ ಸಂಬಂಧ ಪಟ್ಟಂತೆ ರೀ ಎಕ್ಸಾಂ ಮಾಡಿದ್ದೀವೆ. ಅದರ ಫಲಿತಾಂಶವನ್ನು ಅಂತಿಮಗೊಳಿಸಿದ್ದೇವೆ. ಆದೇಶ ಕೊಡುವ ಹಂತದಲ್ಲಿ ಇದ್ದೇವೆ. 402 ಪಿಎಸ್ಐ ಹುದ್ದೆಗಾಗಿ ಮತ್ತೆ ನೇಮಕಾತಿ ಮಾಡಬೇಕಾಗಿದೆ.
ಸೆ.22ರಂದು ಯುಪಿಎಸ್ಸಿ ಪರೀಕ್ಷೆ ಇದ್ದು, ರಾಜ್ಯದಿಂದ 100ಕ್ಕೂ ಹೆಚ್ಚು ಜನ ಪ್ರಿಲಿಮ್ಸ್ ಪಾಸ್ ಮಾಡಿದ್ದಾರೆ. ಅವರಿಗೆ ಅವಕಾಶ ತಪ್ಪಿಹೋಗಬಾರದು. ಹಾಗಾಗಿ ಮುಂದೂಡಲು ಹೇಳಿದ್ದಾರೆ. ಬಿಜೆಪಿ ನಾಯಕರೂ ಮನವಿ ಮಾಡಿದ್ದು ಅದರ ಅನ್ವಯ ಪರೀಕ್ಷೆ ನಡೆಯಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.