ಉಪಯುಕ್ತ ಸುದ್ದಿ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮತ್ತೊಂದು ಅವಕಾಶ: ನವೆಂಬರ್ 30ರವರೆಗೆ ಗಡುವು ವಿಸ್ತರಣೆ

Share It

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಒನ್-ಟೈಮ್ ಸೆಟ್ಲ್‌ಮೆಂಟ್ / ಒಟಿಎಸ್ ಅವಕಾಶದ ಗಡುವನ್ನು ರಾಜ್ಯ ಸರ್ಕಾರ ಎರಡನೇ ಬಾರಿ ನ.30ಕ್ಕೆ ವಿಸ್ತರಿಸಿದೆ.

ಫೆಬ್ರವರಿ ತಿಂಗಳಲ್ಲಿ ಪ್ರಾರಂಭಿಸಲಾದ ಒಟಿಎಸ್ ಯೋಜನೆಯು ಬಾಕಿಯ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಮತ್ತು ದಂಡವನ್ನು ಶೇ.50 ರಷ್ಟು ಕಡಿಮೆ ಮಾಡುವ ಮೂಲಕ ತೆರಿಗೆ ಬಾಕಿ ಇರಿಸಿಕೊಂಡಿರುವವರಿಗೆ ರಿಲೀಫ್ ನೀಡಿದೆ.
ಮೊದಲ ಬಾರಿಗೆ ಜುಲೈ ವರೆಗೆ ಒಟಿಎಸ್​ಗೆ ಅವಕಾಶ ನೀಡಲಾಗಿತ್ತು. ನಂತರ ಯೋಜನೆಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿತ್ತು.

ಬಿಬಿಎಂಪಿ ಇಲ್ಲಿಯವರೆಗೆ ಒಟಿಎಸ್ ಯೋಜನೆ ಮೂಲಕ ಸುಸ್ತಿದಾರರಿಂದ ಸರಿಸುಮಾರು 250 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಜೊತೆಗೆ ಸ್ವಯಂ ಮೌಲ್ಯಮಾಪನ ಯೋಜನೆಯಿಂದ (ಎಸ್‌ಎಎಸ್) 175 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಸುಮಾರು 1.10 ಲಕ್ಷ ತೆರಿಗೆದಾರರು ಬಾಕಿ ಪಾವತಿಸಿದ್ದಾರೆ. 2.70 ಲಕ್ಷ ಮಂದಿ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ.


Share It

You cannot copy content of this page