ಅಪರಾಧ ಸುದ್ದಿ

ಪ್ರೀತಿ ಮಾಡುವುದಾಗಿ ನಂಬಿಸಿ ಕೊಲೆ ಯತ್ನ

Share It

ಬೆಂಗಳೂರು: ಪ್ರೀತಿಗೆ ಒಪ್ಪಿರುವುದಾಗಿ ಕರೆಸಿ ಕೊಲೆ ಯತ್ನ ಮಾಡಿರುವ ಘಟನೆ ಸದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಟ್ಟೆ ಅಂಗಡಿ ವ್ಯಾಪಾರಿ ಹಿತೇಂದ್ರ ಕುಮಾರ್(59) ಎಂಬಾತನ ಮೇಲೆ ಕೊಲೆ ಯತ್ನ ನಡೆದಿದೆ.
ಹಿತೇಂದ್ರ ಕುಮಾರ್ ಅವರ ಬಟ್ಟೆ ಅಂಗಡಿಗೆ ಜೂನ್ ತಿಂಗಳಲ್ಲಿ ಯುವತಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲ ತಿಂಗಳು ಕೆಲಸ ಮಾಡಿ ಕೆಲಸ ಬಿಟ್ಟಿದ್ದಳು. ಸೆ. 14ರಂದು ಭೇಟಿಯಾಗೋಣಾ ಎಂದು ಯುವತಿ ಬಿಟಿಎಂ ಲೇಔಟ್ ನ ಪಾರ್ಕ್ ಗೆ ಹಿತೇಂದ್ರ ಅವರನ್ನು ಕರೆದಿದ್ದಳು.

ಪಾರ್ಕ್​ನ ಬೆಂಚ್ ಮೇಲೆ ಕೂತು ಪ್ರೀತಿಯ ನಿವೇದನೆಯನ್ನು ಯುವತಿ ಬಳಿ ಹೇಳಿಕೊಂಡಿದ್ದ. ಯುವತಿ ಕೂಡ ಈ ಪ್ರೀತಿಗೆ ಒಕೆ ಅಂತಾ ಹೇಳಿದ್ದಳು. ಇದೇ ಖುಷಿಯಲ್ಲಿ ಮಾರನೇ ದಿನ ಮತ್ತೆ ಭೇಟಿ ಮಾಡಲು ಹಿತೇಂದ್ರ ಯುವತಿಯನ್ನು ಕರೆದಿದ್ದ. ಅದೇ ಪಾರ್ಕ್ ನಲ್ಲಿ, ಅದೇ ಬೆಂಚ್ ಮೇಲೆ ಕೂತು ಇಬ್ಬರೂ ಮಾತನಾಡಿದ್ದರು.

ಈ‌ ವೇಳೆ ಯುವತಿ ಸ್ನೇಹಿತ ಸಿದ್ದು ಚಾಕು ಸಮೇತ ಏಕಾಏಕಿ ಎಂಟ್ರಿ ಕೊಟ್ಟಿದ್ದ. ಯುವತಿ ಹಾಗೂ ಹಿತೇಂದ್ರ ಮಾತನಾಡುತ್ತ ಕೂತಿದ್ದನ್ನು ಕಂಡ ಸಿದ್ದು ಜಗಳ ಶುರು ಮಾಡಿದ್ದ. ಈ ವೇಳೆ ಮೂವರ ಮಧ್ಯೆ ಜಗಳವಾಗಿ ಕೊನೆಗೆ ಸಿದ್ದು ಹಿತೇಂದ್ರಗೆ ಚಾಕು ಇರಿದಿದ್ದಾನೆ.

ಹಿತೇಂದ್ರ ಕುಮಾರ್ ಹೊಟ್ಟೆ, ಬೆನ್ನು ಸೇರಿ ಕೆಲವೆಡೆ ಇರಿಯಲಾಗಿದೆ. ಘಟನೆ ಸಂಬಂಧ ತಾನು ಪ್ರೀತಿಸ್ತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತ ಸಿದ್ದು ವಿರುದ್ಧ ಗಾಯಾಳು ಹಿತೇಂದ್ರ ಅವರು ಸದ್ದಗುಂಟೆ ಪಾಳ್ಯದಲ್ಲಿ ದೂರು ದಾಖಲಿಸಿದ್ದಾರೆ. ಸಿದ್ದು ಮತ್ತು ಆತನ ಸ್ನೇಹಿತೆಯನ್ನ ಪೊಲೀಸರು ಬಂಧಿಸಿದ್ದಾರೆ.


Share It

You cannot copy content of this page