ಅಪರಾಧ ಸುದ್ದಿ

ಹುಬ್ಬಳ್ಳಿ ಯುವತಿ ಕೊಲೆಗೆ ಪ್ರೇಮ ಪ್ರಕರಣವೇ ಕಾರಣ

Share It


ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್ನಲ್ಲಿ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು, ಕೋಮು ಸಂಘರ್ಷ ಹರಡಲು ಮುಂದಾದ ಕೆಲವು ಧಾಮರ್ಿಕ ಸಂಘಟನೆಗಳಿಗೆ ಇದೊಂದು ಪ್ರೇಮ ಕಪ್ರಕರಣ ಎಂಬುದನ್ನು ಕೇಳಿ ನಿರಾಸೆಯಾಗಿದೆ.

ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿಯನ್ನು ಫಯಾಜ್ ಎಂಬ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ, ಈ ವಿಡಿಯೋ ವೈರಲ್ ಆಗಿತ್ತು, ಜತೆಗೆ, ಇಡೀ ಕಾಲೇಜು ಪ್ರಕರಣವನ್ನು ಕಣ್ಣಾರೆ ಕಂಡು, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಯುವಕ ಅನ್ಯ ಕೋಮಿನವನಾಗಿದ್ದು, ಆತನ ಉದ್ದೇಶ ಬೇರೆಯದ್ದೇ ಇರಬಹುದು ಎಂದು ಕೆಲ ಹಿಂದೂಪರ ಸಂಘಟನೆಗಳು ಅದಾಗಲೇ ಹೋರಾಟಕ್ಕೆ ಇಳಿದಿದ್ದವು.

ಇದೀಗ ಯುವಕನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ಪ್ರೇಮ ಪ್ರಕರಣ ಎಂಬ ಮಾಹಿತಿ ಸಿಕ್ಕಿದ್ದು, ಮೃತ ಯುವತಿ ನೇಹಾಳನ್ನು ತಾನು ಪ್ರೀತಿಸುತ್ತಿದ್ದುದಾಗಿ ಆರೋಪಿ ಫಯಾಜ್ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ನೇಹಾ, ಫಯಾಜ್ನನ್ನು ಅವೈಡ್ ಮಾಡುತ್ತಿದ್ದಳು. ಇದೇ ಕೊಲೆಗೆ ಕಾರಣ ಎಂದು ಆರೋಪಿ ಹೇಳಿದ್ದಾನೆ. ಆತನ ಹೇಳಿಕೆ ಆಧರಿಸಿ ಪೊಲೀಸರು ಎಲ್ಲ ಮೂಲಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಬೆಳಗಾವಿ ಜಿಲ್ಲೆಯವನು. ಆತನ ತಂದೆ-ತಾಯಿ ಇಬ್ಬರು ಶಿಕ್ಷಕರು ಎಂದು ಗೊತ್ತಾಗಿದೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದಾನೆ. ಆದರೆ ಒಂದೇ ಗಂಟೆಯೊಳಗೆ ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವವರ ಮೇಲೆ ನಿಗಾ ವಹಿಸಲಾಗಿದೆ. ಸಂಘಟನೆಗಳ ಜೊತೆಗೂ ಮಾತನಾಡುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.

ಮೃತಳ ತಂದೆ ನಿರಂಜನ ಹಿರೇಮಠ ಈ ಬಗ್ಗೆ ಮಾತನಾಡಿದ್ದು, “ನನ್ನ ಮಗಳು ಒಂದು ಇರುವೆಯನ್ನೂ ಹೊಡೆದವಳಲ್ಲ. ಅಂಥವಳನ್ನು ಬರ್ಬರವಾಗಿ ಕೊಲೆ ಮಾಡಿದ್ದು ನೋಡಿದರೆ ಮನಸ್ಥಿತಿ ಎಂತದ್ದಿರಬಹುದು. ಮಕ್ಕಳ ಮೇಲೆ ಪೋಷಕರು ಎಷ್ಟು ಕಣ್ಣಿಟ್ಟರೂ ಕಡಿಮೆ” ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, “ಇದೊಂದು ನೋವಿನ ಸಂಗತಿ. ಆಕೆಯ ಪೋಷಕರಿಗೆ ಹೇಗೆ ಮಗಳೋ ನನಗೂ ಮಗಳಂತಿದ್ದಳು. ಯಾವಾಗಲೂ ಮನೆಗೆ ಹೋದಾಗ ಅಂಕಲ್ ಅಂತ ಕರೆಯುತ್ತಿದ್ದಳು. ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು


Share It

You cannot copy content of this page