ಬೆಂಗಳೂರು:ಚನ್ನಪಟ್ಟಣ ವಿಧಾನಸಭೆ ಚುನಾವಣೆ ಗೆ ಮೊದಲೇ ಜೆಡಿಎಸ್ ಗೆ ಕಾಂಗ್ರೆಸ್ ಶಾಕ್ ಕೊಟ್ಟಿದೆ. ನಗರಸಭೆಯ 13 ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸೇರಿದ್ದು, ಅವರ ವಿಲೀನತೆಯನ್ನು ಚುನಾವಣಾಧಿಕಾರಿಗಳು ಅಧಿಕೃತ ಗೊಳಿಸಿದ್ದಾರೆ.
ಚನ್ನಪಟ್ಟಣ ನಗರಸಭೆಗೆ ಜೆಡಿಎಸ್ ನಿಂದ16 ಸದಸ್ಯರು ಆಯ್ಕೆಯಾಗಿದ್ದರು. ಅವರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಗೆ ಸೆಳೆಯಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ13 ಸದಸ್ಯರು ತಮ್ಮನ್ನು ಕಾಂಗ್ರೆಸ್ ಸದಸ್ಯರು ಎಂದೇ ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದರು.
ಸದಸ್ಯರ ಮನವಿ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಯವರು, ಜೆಡಿಎಸ್ ಸದಸ್ಯರು ಸ್ವಯಿಚ್ಛೆಯಿಂದ ಕಾಂಗ್ರೆಸ್ ಸೇರುವುದಾಗಿ ಮನವಿ ಮಾಡಿರುವುದರಿಂದ ಹಾಗೂ ಒಟ್ಟು ಸದಸ್ಯರ 2/3 ನೇ ಭಾಗದಷ್ಟು ಸದಸ್ಯರು ಪಕ್ಷಾಂತರ ಕ್ಕೆ ಮನವಿ ನಾಡಿರುವ ಕಾರಣದಿಂದ ಅವರ ವಿಲೀನ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲಾಗಿದೆ ಎಂದು ಆದೇಶ ಮಾಡಿದ್ದಾರೆ.