ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ನಟ ಉಪೇಂದ್ರ

Share It

ಬೆಂಗಳೂರು: ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ, ಬರೋಬ್ಬರಿ 80 ಹಾಸಿಗೆy ಸಾಮರ್ಥ್ಯಕ್ಕೆ ಹೆಚ್ಚಿಸುವ ಮೂಲಕ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದು, ಪಶ್ಚಿಮ ಬೆಂಗಳೂರಿನಲ್ಲಿ ಅತ್ಯುತ್ತಮ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ.

ನಟ ಉಪೇಂದ್ರ ನಾಗರಭಾವಿಯ ಮಲ್ಟಿಸ್ಪೆಷಾಲಿಟಿ ಫೋರ್ಟಿಸ್‌ ಆಸ್ಪತ್ರೆಯನ್ನು ಉದ್ಘಾಟಿಸಿದರು, ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾಗರಭಾವಿ ಸಾಕಷ್ಟು ಬೆಳೆದಿದೆ, ಒಂದರ್ಥದಲ್ಲಿ ನಾಗರಭಾವಿ ಮಿನಿ ಗಾಂಧೀನಗರವಾಗಿದೆ, ಏಕೆಂದರೆ, ಶೇ.೯೦ರಷ್ಟು ಸಿನಿಮಾ ಮಂದಿ ಇದೇ ಸ್ಥಳದಲ್ಲಿ ವಾಸಿಸುತ್ತಿದ್ದಾರೆ, ಈ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಫೋರ್ಟಿಸ್‌ ಮೇಲ್ದರ್ಜೆಗೇರಿಸಿರುವುದು ಜನಸಾಮಾನ್ಯರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದರು. ಇನ್ನಷ್ಟು ಹೆಚ್ಚು ಸೇವೆಯನ್ನು ಜನಸಾಮಾನ್ಯರು ಈ ಆಸ್ಪತ್ರೆಯಿಂದ ಪ್ರಯೋಜನ ಪಡೆದುಕೊಳ್ಳಲಿ ಎಂದು ಆಶಿಸುವೆ ಎಂದರು.

ಫೋರ್ಟಿಸ್ ಹೆಲ್ತ್‌ ಕೇರ್‌ ಲಿಮಿಟೆಡ್‌ನ ಗ್ರೂಪ್ ಸಿಒಒ ಅನಿಲ್ ವಿನಾಯಕ್ ಮಾತನಾಡಿ, ಸತತ 35 ವರ್ಷಗಳಿಂದ ಜನರಿಗೆ ಆರೋಗ್ಯ ಸೇವೆ ಸಲ್ಲಿಸುತ್ತಾ ಬಂದಿರುವ ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯನ್ನು, ಇನ್ನಷ್ಟು ಮೇಲ್ದರ್ಜೆಗೇರಿಸುವ ಗುರಿಯನ್ನು ತಲುಪಿದ್ದೇವೆ. 24/7 ತುರ್ತು ಮತ್ತು ಟ್ರಾಮಾ ಕೇರ್, ICU & ಕ್ರಿಟಿಕಲ್ ಕೇರ್, ಹೃದಯ ಆರೈಕೆ, ಮಹಿಳಾ ಮತ್ತು ಮಕ್ಕಳ ಆರೈಕೆ, ಯುರೋ-ಆಂಕೊಲಾಜಿ ಸೇರಿದಂತೆ ಎಲ್ಲಾ ವಿಭಾಗದ ತಂತ್ರಜ್ಞಾನವು ಇಲ್ಲಿ ಲಭ್ಯವಿದೆ. ಯಾವುದೇ ತುರ್ತು ಚಿಕಿತ್ಸೆಗೂ ಇಲ್ಲಿ ಚಿಕಿತ್ಸೆ ಸಿಗಲಿದೆ. ಇದಷ್ಟೇ ಅಲ್ಲದೆ, ವಿದೇಶಗಳಿಂದ ಸಾಕಷ್ಟು ಅತ್ಯಾಧುನಿಕ ಯಂತ್ರೋಪಕರಣ ಹಾಗೂ ರೋಬೋಟಿಕ್‌ ತಂತ್ರಜ್ಞಾನವನ್ನು ಸಹ ಹೊಂದಿದ್ದು, ಇದು ಎಂತಹ ಗಂಭೀರ ಹಾಗೂ ಸಂಕೀರ್ಣದಂತಹ ಶಸ್ತ್ರಚಿಕಿತ್ಸೆಯನ್ನೂ ಸಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಷ್ಟೇ ಅಲ್ಲದೆ, ಮುಖ್ಯವಾಗಿ 100 ಹೆಚ್ಚು ಪರಿಣಿತ ಹಾಗೂ ತಜ್ಞ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಪಶ್ಚಿಮ ಭಾಗದಲ್ಲಿ ಇಂತಹ ಅತ್ಯಾಧುನಿಕ ಆಸ್ಪತ್ರೆ ಹೊಂದಿರುವ ಆಸ್ಪತ್ರೆಯಲ್ಲಿ ನಾಗರಭಾವಿ ಫೋರ್ಟಿಸ್‌ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.

ಫೋರ್ಟಿಸ್ ಹಾಸ್ಪಿಟಲ್ಸ್ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, “ಬೆಂಗಳೂರಿನ ನಾಗರಭಾವಿಯಲ್ಲಿ ನಮ್ಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲು ಹೆಮ್ಮೆ ಎನಿಸುತ್ತದೆ. ಈಗ ಆರೋಗ್ಯ ಸೇವೆಗಳನ್ನು ಬಯಸುವ ದೊಡ್ಡ ವರ್ಗದ ಜನರು ಈ ಸೇರ್ಪಡೆಯಿಂದ ಪ್ರಯೋಜನ ಪಡೆಯುತ್ತಾರೆ. ಇದು ನಮ್ಮ ರೋಗಿಗಳಿಗೆ ಸೂಕ್ತ ಆಯ್ಕೆ ನೀಡುವ ಜೊತೆಗೆ, ಅತ್ಯುತ್ತಮ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಫೋರ್ಟಿಸ್ನಲ್ಲಿ, ನಮ್ಮ ರೋಗಿಗಳು ತಮ್ಮ ಪ್ರಯಾಣದ ಪ್ರತಿ ಹಂತದಲ್ಲೂ ಗುಣಮಟ್ಟದ ಆರೈಕೆ ಪಡೆಯಲಿದ್ದಾರೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ. ರಜನಿ ಎಂ, ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರವೀಂದ್ರನಾಥ್ ಎಂ, ಹೃದಯತಜ್ಞ ಡಾ. ವಿವೇಕ್ ಜವಳಿ, ಫೋರ್ಟಿಸ್ ಹೆಲ್ತ್‌ಕೇರ್‌ನ ಫೆಸಿಲಿಟಿ ಡೈರೆಕ್ಟರ್ ಡಾ. ತೇಜಸ್ವಿನಿ ಪಾರ್ಥಸಾರಥಿ ಸೇರಿದಂತೆ ಇತರೆ ವೈದ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.


Share It

You May Have Missed

You cannot copy content of this page