ಅಪರಾಧ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಜಗಳ : ಕೊಲೆಯಲ್ಲಿ ಅಂತ್ಯ

Share It

ಬೆಳಗಾವಿ : ಸಹೋದರರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಬೈಲಹೊಂಗಲ ತಾಲೂಕು ಅಮಟೂರ-ಬೇವಿನಕೊಪ್ಪ ರಸ್ತೆಯ ಮೇಲೆ ಸೋಮವಾರ ಘಟನೆ ನಡೆದಿದೆ.

ಅಮಟೂರ ಗ್ರಾಮದ ಕೇದಾರ ಯಲ್ಲಪ್ಪ ಅಂಗಡಿ(42) ಕೊಲೆಯಾದವ. ತಮ್ಮ ಜಮೀನಿನಲ್ಲಿ ಬೇರೆಯವರಿಗೆ ದಾಟಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವಗೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಈತ ಮೃತಪಟ್ಟಿದ್ದಾನೆ.

ಬಾಳಪ್ಪ ಶಿವಾನಂದ ಅಂಗಡಿ (21), ಶಿವಾನಂದ ಬಾಳಪ್ಪ ಅಂಗಡಿ (51), ಆತ್ಮಾನಂದ ಶಿವಾನಂದ ಅಂಗಡಿ(15) ಪರಾರಿಯಾಗಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಬೈಲಹೊಂಗಲ ಪೊಲೀಸರು ಜಾಲ ಬೀಸಿದ್ದಾರೆ.


Share It

You cannot copy content of this page