ಅಪರಾಧ ಸಿನಿಮಾ ಸುದ್ದಿ

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.8 ಕ್ಕೆ ಮುಂದೂಡಿಕೆ

Share It

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ 57ನೇ ಸಿಸಿಎಚ್ ಕೋರ್ಟ್ ಅಕ್ಟೋಬರ್ 8 ಕ್ಕೆ ಮುಂದೂಡಿದೆ.

ದರ್ಶನ್ ಪರ ಇಂದು ಜಾಮೀನು ಅರ್ಜಿ ವಿಚಾರಣೆ ಇಂದು ಮುಂದುವರಿಯಿತು. ಇಂದಿನ ವಿಚಾರಣೆಯಲ್ಲಿ ದರ್ಶನ್ ಜಾಮೀನು ಅರ್ಜಿ ಪರ ವಾದ ಮುಂದುವರೆಸಿದ ವಕೀಲ ಸಿ.ವಿ ನಾಗೇಶ್ ಈ ಕೊಲೆ ಪ್ರಕರಣದಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ದರ್ಶನ್ ಅವರನ್ನು ಸಿಲುಕಿಸಲು ಸಾಕ್ಷ್ಯಗಳನ್ನು ಪ್ಲಾಂಟ್ ಮಾಡಿದ್ದಾರೆ ಎಂದು ವಾದ ಮಂಡಿಸಿದರು. ಬಳಿಕ ಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 8 ಕ್ಕೆ ಮುಂದೂಡಿತು.


Share It

You cannot copy content of this page