ಅಪರಾಧ ಸುದ್ದಿ

ಭಕ್ತಿಯಲ್ಲಿ ಮಗ್ನರಾಗಿ ಭಜನೆ ಮಾಡುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ:ವಿಡಿಯೋ ವೈರಲ್

Share It

ಬೆಂಗಳೂರು: ಭಕ್ತಿಪರವಶರಾಗಿ ದೇವರ ಧ್ಯಾನ ಮಾಡುತ್ತಿದ್ದಾಗ, ದೇವರು ಬಂದು ನಮಗೆ ವರ ಕೊಡ್ತಾನೆ ಎನ್ನುವುದು ನಮ್ಮ ನಂಬಿಕೆ. ಆದರೆ, ಅಂತಹ ನಂಬಿಕೆಯ ಸ್ಥಳದಲ್ಲಿಯೇ ಕಳ್ಳನೊಬ್ಬ ¨ಭಜನೆ ಮಾಡುತ್ತಿದ್ದ ಮಹಿಳೆಯ ಸರ ಕದ್ದು ಪರಾರಿಯಾಗಿದ್ದಾನೆ.

ಇಂತಹದ್ದೊAದು ಪ್ರಕರಣ ನಗರದ ನಂದಿನಿ ಲೇಔಟ್‌ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ನಡೆದಿದೆ.ಈ ಘಟನೆ ಅಕ್ಟೋಬರ್ ೧೦ರಂದು ನಡೆದಿದ್ದು, ಈ ವಿಡಿಯೋ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆ ಆಗಿದೆ. ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿದೆ.

ನಂದಿನಿ ಲೇಔಟ್‌ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ಓರ್ವ ಮಹಿಳೆ ದೇವರ ಭಜನೆಯಲ್ಲಿ ಮಗ್ನರಾಗಿದ್ದರು. ಈ ವೇಳೆ ಖತರ್ನಾಕ್ ಕಳ್ಳ ಬಂದಿದ್ದು, ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿ ಎಳೆದಿದ್ದಾನೆ. ಕಳ್ಳ ಸರ ಎಳೆಯುತ್ತಿದ್ದಂತೆ ಮಹಿಳೆ ಜೋರಾಗಿ ಕೂಗಿಕೊಳ್ಳುತಾ, ತಪ್ಪಿಸಿಕೊಳ್ಳುವಾಗ ಕಟ್ಟಾಗಿ ಅರ್ಧ ಸರ ಕಳ್ಳನ ಕೈಸೇರಿದೆ.

ಸುಮಾರು ಮೂವತ್ತು ಗ್ರಾಂ ಸರ ಕಿತ್ತುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲು ಮಾಡಿದ ನಂದಿನಿ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Share It

You cannot copy content of this page