ಸುದ್ದಿ

ಫಿಜ್ಜಾ ಮಾರಟಕ್ಕೆ ಹೆಚ್ಚುವರಿ 25 ಪೈಸೆ ಪಡೆದ ಕಂಪನಿ: ನ್ಯಾಯಾಲಯದ ಮೆಟ್ಟಿಲೇರಿದ ಗ್ರಾಹಕನಿಗೆ 1,000 ರೂ ದಂಡ

Share It

ಅಹಮದಾಬಾದ್ : ವ್ಯಕ್ತಿಯೊಬ್ಬ ಪಿಜ್ಜಾ ಮಾರಾಟ ಕೇಂದ್ರದಲ್ಲಿ ಹೆಚ್ಚುವರಿ 25 ಪೈಸೆ ಹಣ ಪಡೆಯುತ್ತಿರುವುದಾಗಿ ನ್ಯಾಯಾಲಯದ ಮೆಟ್ಟಿಲೇರಿ 1,000 ರೂಪಾಯಿಯನ್ನು ದಂಡ ಕಟ್ಟಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಡೆಟ್ರೋಜ್-ರಾಂಪುರ ಗ್ರಾಮದ ಪ್ರಶಾಂತ್ ಪಾಟೀಲ್ ಎಂಬಾತ ಇದೇ ಜನವರಿ 10 ರಂದು ಪಿಜ್ಜೇರಿಯಾ ಎಂಬ ಮಾರಾಟ ಕೇಂದ್ರಕ್ಕೆ ಹೋಗಿದ್ದು, ತಂಪು ಪಾನೀಯ ಮತ್ತು ಪಿಜ್ಜಾ ಗೆ 665 ರೂ ಗಳ ಬಿಲ್ ನೀಡಿದ್ದಾರೆ. ಪ್ರಶಾಂತ್ ರಿಯಾಯಿತಿ ಹಾಗೂ ಜಿಎಸ್ಟಿ ಎಲ್ಲವನ್ನೂ ಲೆಕ್ಕ ಹಾಕಿ ನಿಜವಾದ ಮೊತ್ತ
664.76. ರೂ ಆಗಿದ್ದು ಹೆಚ್ಚುವರಿ ಹಣವನ್ನು ಪಡೆಯುತ್ತಾರೆ ಎಂದು ಆರೋಪ ಮಾಡಿದ್ದಾನೆ.

25 ಪೈಸೆ ಹಣವನ್ನು ವಾಪಸ್ ಕೊಡುವಂತೆ ಮ್ಯಾನೇಜ್ಮೆಂಟ್ ಗೆ ತಿಳಿಸಿದ್ದಾನೆ. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಹೋಟೆಲ್ ವಿರುದ್ಧ ಪ್ರಶಾಂತ್ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಶಾಂತ್ ರವರು ನ್ಯಾಯಾಲಯದಲ್ಲಿ ಹೋಟೆಲ್ ವಿರುದ್ಧ ಗ್ರಾಹಕರಿಗೆ ವಂಚನೆ ಮಾಡಿರುವುದನ್ನು
ಮನಗಂಡು ಭಾರಿ ದಂಡವನ್ನು ವಿಧಿಸುವಂತೆ ಕೋರಿದರು. ಹೋಟೆಲ್ ಸಹ ಕಾನೂನಿನ ಅನ್ವಯ ದಾಖಲೆಗಳನ್ನು ಪ್ರಸ್ತುತ ಪಡಿಸಿತು. ಬಿಲ್ಲಿಂಗ್ ಸಾಫ್ಟ್‌ವೇರ್ ಅನ್ನು ಬಳಸಲಾಗುತ್ತಿದೆ ಎಂದು ಹೇಳಿತು.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೊತ್ತವನ್ನು ರೌಂಡ್ ಅಪ್ ಮಾಡುವ ಮೂಲಕ ಬಿಲ್ ಅನ್ನು ರಚಿಸಲಾಗಿದೆ ಎಂದು ವಾದವನ್ನು ಮಂಡಿಸಿದರು.

ದೂರುದಾರರು ಸುಳ್ಳು ದೂರು ದಾಖಲಿಸಿ ಆಯೋಗವನ್ನು ದಾರಿ ತಪ್ಪಿಸಿದ್ದಾರೆ. ನಮ್ಮ ದೃಷ್ಟಿಯಲ್ಲಿ, ದೂರು ಕ್ಷುಲ್ಲಕವೆಂದು ತೋರುತ್ತದೆ, ಮತ್ತು ಕೇವಲ 24 ಪೈಸೆ ಪಡೆಯಲು ಈ ದೂರನ್ನು ಸಲ್ಲಿಸುವ ಮೂಲಕ ಆಯೋಗದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿತು.

ಪ್ರಶಾಂತ್ ಸಲ್ಲಿಸಿದ್ದ ದೂರನ್ನು ಕೂಲಸೆ ಗೊಳಿಸಿದ ನ್ಯಾಯಾಲಯ ಅಂಗಡಿಯ ಮಾಲೀಕನ ಪರವಾಗಿ ತೀರ್ಪನ್ನು ನೀಡಿದೆ. ಹಾಗೂ ಪ್ರಶಾಂತ್ ಗೆ 1,000 .ರೂ ದಂಡವನ್ನು ವಿಧಿಸಿ ರಾಜ್ಯ ಗ್ರಾಹಕ ಸಂರಕ್ಷಣಾ ವೇದಿಕೆಗೆ ಸಲ್ಲಿಸಿತು.


Share It

You cannot copy content of this page