ಬೆಂಗಳೂರು: ಉತ್ತರ ಪ್ರದೇಶದ ಆಯೋಧ್ಯೆಯಿಂದ ಬೆಂಗಳೂರಿಗೆ ಬರಲಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತುರ್ತು ಭೂಸ್ಪರ್ಶ ಮಾಡಲಾಗಿದೆ.
ಆಯೋಧ್ಯೆಯಿಂದ ಬೆಂಗಳೂರಿಗೆ 130 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಹಾರಾಟವನ್ನು ಆರಂಭಿಸಿತ್ತು. ಈ ನಡುವೆ ಇದ್ದಕ್ಕಿದ್ದಂತೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ವಾಪಸ್ ಆಯೋಧ್ಯೆ ವಿಮಾನ ನಿಲ್ದಾಣ ದಲ್ಲಿಯೇ ಲ್ಯಾಂಡ್ ಮಾಡಲಾಯಿತು.
ತಕ್ಷಣವೇ ರಕ್ಷಣಾ ಅಧಿಕಾರಿಗಳು ಇಡೀ ವಿಮಾನವನ್ನು ತಪಾಸಣೆ ನಡೆಸಿದ್ದು, ಸಿಬ್ಬಂದಿ ಮತ್ತ ಪ್ರಯಾಣಿಕರನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ಅನುಮಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೇಳಲಾಗಿದೆ.
ತಪಾಸಣೆಯ ನಂತರ ವಿಮಾನವನ್ನು ಮತ್ತೇ ಬೆಂಗಳೂರಿಗೆ ಟೇಕಾಪ್ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ವಿಮಾನದ ಆಗಮನ ವಿಳಂಬವಾಗಲಿದೆ ಎಂದು ಆಯೋಧ್ಯೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

