ಬೆಂಗಳೂರು: ಉತ್ತರಪ್ರದೇಶ-ಗಾಜಿಯಾಬಾದ್ ನಲ್ಲಿ ಇರುವ ಕೆಂದ್ರ ಆಶ್ರಮ, ವ್ಯಾಗ ಸಂಸ್ಥಾನ ಸಂಘಟಿತ ದಾಸ್ನಾ ದೇವಸ್ಥಾನದ ಮುಖ್ಯಸ್ಥರಾಗಿರುವ ಯತಿ ನರ್ಸಿಂಗಾನಂದ ಗಿರಿ ಅವರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುವಾಗ ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಬಗ್ಗೆ ಹಾಗೂ ಪವಿತ್ರ ಕುರ್ ಆನ್ ಬಗ್ಗೆ ಅವಹೇಳನಾಕಾರಿ ಮಾತನಾಡಿದನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಇದಕ್ಕೆ ಸಂಬಂಧಿಸಿ ಗಂಗಾವತಿ ನಗರ ಠಾಣೆ ಯಲ್ಲಿ ದೂರು ದಾಖಲು ಮಾಡಿ ಮತ್ತು ಗಂಗಾವತಿ ದಂಡಾಧಿಕಾರಿಗಳಿಗೆ ಮನವಿ ಮಾಡಲಾಯಿತು. ಮುಸ್ಲಿಂ ಸಮಾಜದ ಮುಖಂಡರಾದ ಅಕ್ತರ್ ಅನ್ಸಾರಿ ಸಾಬ್ ಹಾಗೂ ಉಪಸ್ಥಿತರಿದ್ದರು.