ಅಪರಾಧ ಸುದ್ದಿ

ಮುಂಬೈ: ರಿಯಾ ಪ್ಯಾಲೇಸ್ ನಲ್ಲಿ ಬೆಂಕಿ ಮೂವರು ದುರ್ಮರಣ !

Share It

ಮುಂಬೈ: ಅಂಧೇರಿಯದ ಐಷಾರಾಮಿ ಕಾಂಪ್ಲೆಸ್ ಆದ ಲೋಖಂಡವಾಲಾ ಕಟ್ಟಡದಲ್ಲಿ 15 ತಿಂಗಳಲ್ಲಿ 3 ಬಾರಿ ಅಗ್ನಿ ದುರಂತ ಸಂಭವಿಸಿದ್ದು ಬುಧವಾರ ಮೂವರು ಬಲಿಯಾಗಿದ್ದಾರೆ.

ಈ ಹಿಂದೆ ಸೆಪ್ಟೆಂಬರ್ 19 ರಂದು ಸ್ಟರ್ಲಿಂಗ್ ಬಂಗಲೆಯ 11 ನೆಯ ಕೊಠಡಿಯಲ್ಲಿ ಅವಘಡ ಸಂಭವಿಸಿತ್ತು. ಕಳೆದ ವರ್ಷ ಜುಲೈ 23 ರಂದು ಬೆಂಕಿ ಕಾಣಿಸಿಕೊಂಡಿತು. ಆದರೆ ಈಗ ಮೂರನೇ ಬಾರಿಗೆ ನೆಬ್ಯೂಲನ್ ಅಪಾರ್ಟ್ಮೆಂಟ್ ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ.

ರಿಯಾ ಪ್ಯಾಲೇಸ್ ನ ಕ್ರಾಸ್ ಲೈನ್ ಸಂಖ್ಯೆ 4 ರಲ್ಲಿ ಬೆಳಗ್ಗೆ 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ದೃಷ್ಟಿ ಹೀನತೆಯಿಂದ ಬಳಲುತ್ತಿದ್ದ ಚಂದರ್ ಪ್ರಕಾಶ್ ಸೋನಿ(73), ಅವರ ಪತ್ನಿ ಕಾಂತ(65) ಹಾಗೂ ಮನೆ ಕೆಲಸಗಾರ ರವಿ ಭಾಟಿಯಾ(43) ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಬೆಂಕಿಯನ್ನು ನಂದಿಸುವ ಕೆಲಸ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ವಿಭಾಗೀಯ ಅಧಿಕಾರಿ ಪಿ. ಡಿ. ಸಂಡಿಕರ್ ಹೇಳಿದ್ದಾರೆ. ರಿಯಾ ಪ್ಯಾಲೇಸ್ ನ ಕಾರ್ಯದರ್ಶಿ ಕ್ರೀಶಾನ್ ಅರೋರಾ ಹಾಗೂ ಅಧ್ಯಕ್ಷ ಡಾ. ರಾಜು ಸಾಹೇತ್ಯ ಸಿಸಿಟಿವಿ ದೃಶ್ಯ ಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಗೆ ಮೂವರನ್ನು ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


Share It

You cannot copy content of this page