ಅಪರಾಧ ರಾಜಕೀಯ ಸುದ್ದಿ

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯಲ್ಲಿ 2,067 ಕೋಟಿ ಹಗರಣ: 9 IAS ಅಧಿಕಾರಿಗಳ ವಿರುದ್ದ ಇಡಿಯಲ್ಲಿ ದೂರು

Share It


ಬೆಂಗಳೂರು: ಕೇಂದ್ರ ಸರ್ಕಾರದ 13ನೇ, 14ನೇ ಮತ್ತು 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ನೀಡಿದ್ದ ಅನುದಾನದಲ್ಲಿ 2067 ಕೋಟಿ ರು. ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎನ್.ಆರ್. ರಮೇಶ್ ಆರೋಪ ಮಾಡಿದ್ದಾರೆ.

ಈ ಕುರಿತು ED ಯಲ್ಲಿ ದೂರು ದಾಖಲು ಮಾಡಿದ್ದು, ಬಿಬಿಎಂಪಿ ಮಾಜಿ ಆಯುಕ್ತರಾಗಿದ್ದ ಲಕ್ಷ್ಮೀನಾರಾಯಣ್, ಪ್ರಸ್ತುತ ಸಂಸದ ಜಿ. ಕುಮಾರ್ ನಾಯಕ್, ಮಂಜುನಾಥ್ ಪ್ರಸಾದ್, ಬಿ. ಹೆಚ್. ಅನಿಲ್ ಕುಮಾರ್, ಗೌರವ್ಗುಗುಪ್ತ ಮತ್ತು ತುಷಾರ್ ಗಿರಿನಾಥ್ ವಿರುದ್ಧ ದೂರು ನೀಡಿದ್ದಾರೆ‌. ಇದೇ ಅವಧಿಯಲ್ಲಿ ಪಾಲಿಕೆ ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವ ವಿಜಯ್ ಭಾಸ್ಕರ್, ರಾಕೇಶ್ ಸಿಂಗ್ ಮತ್ತು ಉಮಾಶಂಕರ್ ವಿರುದ್ಧವೂ ದೂರು ದಾಖಲುಮಾಡಲಾಗಿದೆ.

ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 9 IAS ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ನಕಲಿ ವಸ್ತುಗಳನ್ನು ಬಳಸಿ, ಯಾವುದೇ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮಾಡದೆ, ಹಣ ದುರ್ಬಳಕೆಯಾಗಿದೆ. ಕೆ.ಜೆ. ಜಾರ್ಜ್ ಅವರ ಬೆಂಬಲಿಗರಿಗೆ ಟೆಂಡರ್ ನೀಡಿ, ಬಿಬಿಎಂಪಿ ಹಣ ಗುಳುಂ ಮಾಡಿಕೊಳ್ಳಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಆದೇಶ: ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 9 IAS ಅಧಿಕಾರಿಗಳ ಮೇಲೆ ದೂರು ದಾಖಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು, ಬದ್ಧತೆಯಿದ್ದರೆ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ


Share It

You cannot copy content of this page